ವೇಣೂರು: ದೇವಾಡಿಗರ ಸೇವಾ ವೇದಿಕೆ, ವೇಣೂರು ವಲಯ ದೇವಾಡಿಗರ ಮಹಿಳಾ ವೇದಿಕೆ ವೇಣೂರು ಹಾಗೂ ವೇಣೂರು ದೇವಾಡಿಗರ ಸಮುದಾಯ ಭವನ ಇವರ ಜಂಟಿ ಆಶ್ರಯದಲ್ಲಿ
ಆಟಿಡೊಂಜಿ ದಿನ ಕಾರ್ಯಕ್ರಮ ನಿಟ್ಟಡೆ-ವೇಣೂರು ದೇವಾಡಿಗರ ಸಮುದಾಯ ಭವನದಲ್ಲಿ ಆ.11ರಂದು ಜರಗಲಿರುವುದು.
ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಧರ್ಮಸ್ಥಳ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಿವೃತ್ತ ಪ್ರಬಂಧಕರು ಶೀನ ದೇವಾಡಿಗ, ಅಧ್ಯಕ್ಷತೆಯನ್ನು ವೇಣೂರು ದೇವಾಡಿಗರ ಸೇವಾ ವೇದಿಕೆಯ ಗೌರವಾಧ್ಯಕ್ಷ ಸುಂದರ ಎಂ. ದೇವಾಡಿಗ, ಆಟಿದ ಮಹತ್ವದ ಬಗ್ಗೆ ಉಪನ್ಯಾಸವನ್ನು ನಡ ಸರಕಾರಿ ಪದವಿಪೂರ್ವ ಕಾಲೇಜ್ ನ ಪ್ರಾಂಶುಪಾಲ ರಾಮಚಂದ್ರ, ಗೌರವ ಉಪಸ್ಥಿತಿಯನ್ನು ವೇಣೂರು ದೇವಾಡಿಗರ ಸೇವಾ ವೇದಿಕೆಯ ಅಧ್ಯಕ್ಷ ಸುರೇಶ್ ಮೊಯಿಲಿ, ಕಾಂಜರಕಟ್ಟೆ ಪಂಚಾಯತು ಅಭಿವೃದ್ಧಿ ಅಧಿಕಾರಿ ಅಶೋಕ್ ದೇವಾಡಿಗ, ವೇಣೂರು ದೇವಾಡಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪಿ.ಎನ್., ಬೆಳ್ತಂಗಡಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ದಯಾನಂದ ದೇವಾಡಿಗ ಹಾಗೂ ವೇಣೂರು ದೇವಾಡಿಗರ ಸೇವಾ ಹಾಗೂ ಮಹಿಳಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆ: ಬೆಳಿಗ್ಗೆ ಗಂಟೆ 11-30ರಿಂದ 1-00ರ ತನಕ ಆಟಿಯ ಆಟೋಟ ಸ್ಪರ್ಧೆಗಳು, ಆಟಿಯ ತಿಂಡಿ ತಿನಸುಗಳ ಪ್ರದರ್ಶನ.