ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ ವಿಧಿವಶ

0

ಬೆಳ್ತಂಗಡಿ: ಖ್ಯಾತ ಯಕ್ಷಗಾನ ಕಲಾವಿದ ಕಿರಣ್ ಪಂಜ(45 ವ) ರವರು ಆ.5ರಂದು ಅಲ್ಪಕಾಲದ ಅಸೌಖ್ಯದಿಂದ ಅವರ ಪಂಜದ ಕಮಿಲ ಸ್ವಗೃಹದಲ್ಲಿ ನಿಧನರಾದರು.

ಅವರು ಕರ್ನಾಟಕ, ಧರ್ಮಸ್ಥಳ, ಬಪ್ಪನಾಡು, ಕದ್ರಿ, ಪುತ್ತೂರು, ಕುಂಟಾರು, ಗೆಜ್ಜೆ ಗಿರಿ, ಬಾಚೆಕೆರೆ ಮೇಳದಲ್ಲಿ ಅವರು ಸ್ತ್ರೀ ವೇಷ ಮತ್ತು ಬೇರೆ ವೇಷಾಧಾರಿಯಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ಖ್ಯಾತಿಯಾಗಿದ್ದರು.ಅನೇಕ ಸನ್ಮಾನ ಪಡೆದಿದ್ದರು.

ಮೃತರು ತಾಯಿ ಜಾನಕಿ, ಪತ್ನಿ ಶಶಿಕಲಾ, ಪುತ್ರ ಮಿಥುನ್, ಪುತ್ರಿಯರಾದ ರಕ್ಷಾ, ದೀಕ್ಷಾ, ಅಳಿಯ, ಮೊಮ್ಮಗ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here