ವಿದೇಶಿ ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉಜಿರೆ ಮಂಜುಶ್ರೀ ನಗರದ ನಿವಾಸಿಗೆ ಲಕ್ಷಾಂತರ ರೂ. ಮೋಸ

0

ಉಜಿರೆ: ವಿದೇಶಿ ಕಂಪೆನಿಯಲ್ಲಿ ಉತ್ತಮ ಉದ್ಯೋಗಾವಕಾಶ ಇದೆ ಎಂದು ನಂಬಿ ವ್ಯಕ್ತಿಯೊಬ್ಬರು 2.72 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ ಸ್ಟೆನಿ ಅಲ್ಫೋನ್ಸ್ ಕಾರ್ಡೋಜ (64) ಹಣ ಕಳೆದುಕೊಂಡವರಾಗಿದ್ದಾರೆ.ಅವರು ಈ ಹಿಂದೆ ವಿದೇಶದ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವರು ನಾಲ್ಕೂವರೆ ವರ್ಷದಿಂದ ಊರಿನಲ್ಲಿಯೇ ಇದ್ದರು. ಫೇಸ್ಟುಕ್ ಜಾಲತಾಣದ ಲಿಂಕ್ ಮುಖಾಂತರ ದುಬಾಯಿ ಮೂಲದ ಆಲ್ ಜಬೀರ್ ಕಂಪೆನಿಯಲ್ಲಿ ಉತ್ತಮ ಸಂಬಳದ ಉದ್ಯೋಗದ ಭರವಸೆ ನಂಬಿ ಅಪರಿಚಿತನ ಬ್ಯಾಂಕ್ ಖಾತೆಗೆ 2,72,621 ರೂ. ವರ್ಗಾಯಿಸಿ ಮೋಸ ಹೋಗಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

p>

LEAVE A REPLY

Please enter your comment!
Please enter your name here