ಉಜಿರೆ: ಸಂತ ಜಾರ್ಜ್ ದೇವಾಲಯದಲ್ಲಿ ಸಂತ ಅಲ್ಫೋನ್ಸಾರವರ ಹಬ್ಬದ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ

0

ಉಜಿರೆ: ಸಂತ ಜಾರ್ಜ್ರ ದೇವಾಲಯದಲ್ಲಿ ಸಂತ ಅಲ್ಫೋನ್ಸಾರವರ ಹಬ್ಬದ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಜುಲೈ 28ರಂದು ಕ್ಯಾಥೋಲಿಕ್ ಸಭೆಯ ಪ್ರಥಮ ಸಂತರದ ಅಲ್ಫೋನ್ಸ ರವರ ಹಬ್ಬವನ್ನು ಬಹಳ ವಿಜೃಭಣೆಯಿಂದ ಆಚರಿಸಲಾಯಿತು.

ಹಬ್ಬದ ಬಲಿಪೂಜೆ ಹಾಗೂ ಸಂದೇಶವನ್ನು ಉಜಿರೆ ಸಂತ ಜಾರ್ಜ್ ದೇವಾಲಯದ ವಿಕರ್ ವಂದನಿಯ ಫಾ.ಬಿಜು ಮ್ಯಾಥ್ಯೂ ಅಂಬಟ್ ನೆರವೇರಿಸಿದರು.ಬಲಿಪೂಜೆಯ ನಂತರ ಸಂಡೆ ಸ್ಕೂಲ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.

ಕಳೆದ ವರ್ಷದಲ್ಲಿ ಉನ್ನತ ಅಂಕ ಗಳಿಸಿದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಗಿಲ್ ವಿಜಯೋತ್ಸವ 25ನೇ ವರ್ಷಾಚರಣೆಯ ಅಂಗವಾಗಿ ಉಜಿರೆ ಕೆ ಎಸ್ ಎಂ ಸಿ ಎ ಸಂಘಟನೆಯ ವತಿಯಿಂದ ನಿವೃತ ಸೈನಿಕರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here