ಶಿಬಾಜೆ: ಬೆಳ್ತಂಗಡಿಯ ಶಿಬಾಜೆ ಗ್ರಾಮದ ಬಂಡಿಹೊಳೆ ಪರಿಸರದಲ್ಲಿ ಸ್ಥಳೀಯರಾದ ನವೀನ ದಾಮ್ಲೆ ಹಾಗೂ ಸಂಗಡಿಗರು ಪ್ರತಿ ವರ್ಷದಂತೆ ಈ ವರ್ಷ ಕೂಡ ಗಿಡ ನೆಡುವ ಕಾರ್ಯಕ್ರಮ ಜು.27ರಂದು ನಡೆಸಿದರು.ಬೆಳಗ್ಗೆ ಸುಮಾರು 9 ಗಂಟೆಯಿಂದ ಶುರುವಾದ ಕೆಲಸ ಮಳೆಯಲ್ಲೂ ಕೂಡ ಸಾಗಿ ಮದ್ಯಾಹ್ನ 2 ಗಂಟೆಗೆ ಸಂಪನ್ನವಾಯಿತು.ಮಾವು, ಹಲಸು ಇತ್ಯಾದಿ ಗಿಡಗಳು ಹಾಗೂ ಸಮೀಪದ ನರ್ಸರಿಯಿಂದ ಖರೀದಿಸಿದ ಸುಮಾರು 160 ಗಿಡಗಳನ್ನು ನೆಡಲಾಯಿತು.
ತಂಡದಲ್ಲಿ ಸ್ಥಳೀಯರಾದ ದಯಾನಂದ ಗೌಡ, ಪ್ರಾಣೇಶ ಖರೆ, ಸುದರ್ಶನ ದಾಮ್ಲೆ, ಕಾರ್ತಿಕ್ ದಾಮ್ಲೆ ಇದ್ದರು. ವಿಶೇಷವಾಗಿ Consero company ya ಸುಮಾರು 14 ಮಂದಿ ಉದ್ಯೋಗಿಗಳು ಕೂಡ ಬೆಂಗಳೂರಿನಿಂದ ಬಂದು ಸಹಕರಿಸಿದ್ದು ವಿಶೇಷ. ಸ.ಕಿ.ಪ್ರಾ.ಶಾಲೆ ಭಂಡಿಹೊಳೆ ಇಲ್ಲಿನ ಶಾಲೆಯ ವಿದ್ಯಾರ್ಥಿಗಳು ಕೂಡ ಈ ಕೆಲಸಕ್ಕೆ ಕೈ ಜೋಡಿಸಿ ಜೊತೆಗೆ ಸಮಯ ಕಳೆದದ್ದು ಒಂದು ಸುಂದರ ಕ್ಷಣ ಎಂಬುವುದು ತಂಡದ ಎಲ್ಲಾ ಸದಸ್ಯರ ಅಭಿಪ್ರಾಯ.ಇದಕ್ಕೋಸ್ಕರ ಶಾಲೆಯ ಮುಖ್ಯೋಪಾಧ್ಯಾಯಿನಿ ರಂಜನಾ ದಾಮ್ಲೆ, ಸಹ ಶಿಕ್ಷಕರಿಗೆ ಮೆಚ್ಚುಗೆ ವ್ಯಕ್ತವಾಯಿತು.
ಈ ಪರಿಸರ ಪ್ರೇಮಿಗಳ ಕಾರ್ಯಕ್ರಮಕ್ಕೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಇತ್ಯಾದಿಗಳನ್ನು ನವೀನ್ ದಾಮ್ಲೆ ಅವರು ಪ್ರಾಯೋಜಿಸಿದರು.ಬಿಡದೆ ಸುರಿವ ಮಳೆಯಲ್ಲಿ ನಡೆದ ಈ ಕೆಲಸಕ್ಕೆ ಇನ್ನೂ ಹೆಚ್ಚಿನ ಬೆಂಬಲ ಸಿಕ್ಕಲ್ಲಿ ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಕೆಲಸಗಳು ನಡೆಸಬಹುದು ಎಂಬ ಅಭಿಪ್ರಾಯ ಕೂಡ ಮೂಡಿ ಬಂತು.