ಬಂದಾರು: ಹದಗೆಟ್ಟ ಚನ್ನೋಕ್ಕು ರಸ್ತೆ- ಗ್ರಾ.ಪಂ.ನಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆ

0

ಬಂದಾರು: ಬಂದಾರು ಗ್ರಾಮದ ಮೈರೋಳ್ತಡ್ಕ ಪುತ್ತಿಲ ಬೈಪಾಡಿ -ಬಜಿಲ ಸಂಪರ್ಕ ರಸ್ತೆಯ ಚನ್ನೋಕ್ಕು ಎಂಬಲ್ಲಿ ಈ ಬಾರಿಯ ವಿಪರೀತ ಮಳೆಯ ಪರಿಣಾಮ ರಸ್ತೆಯಲ್ಲಿ ಒರತೆ ಸಂಭವಿಸಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು.

ಸಮಸ್ಯೆಗಳನ್ನು ಅವಲೋಕಿಸಿದ ಬಂದಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಗುಂಡಿಗಳಿಗೆ ಚರೆಲ್ ಹಾಕಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಸದಸ್ಯರುಗಳಾದ ಸುಚಿತ್ರ ಮುರ್ತಾಜೆ, ಪರಮೇಶ್ವರಿ, ಪವಿತ್ರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ರವರುಗಳ ಸ್ಪಂದನೆ ಬಗ್ಗೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

LEAVE A REPLY

Please enter your comment!
Please enter your name here