ಕಡಿರುದ್ಯಾವರ: ನೂಜಿ ರಸ್ತೆಯ ಬದಿಯಲ್ಲಿ ಅಪಾಯಕಾರಿ ಮರ

0

ಕಡಿರುದ್ಯಾವರ: ನೂಜಿ ರಸ್ತೆಯ ಬದಿಯಲ್ಲಿ ಆಕೇಶಿಯ ಮರವೊಂದು ವಿದ್ಯುತ್ ತಂತಿಯ ಮೇಲೆ ಬೀಳುವ ಪರಿಸ್ಥಿತಿಯಲ್ಲಿದ್ದು, ಮರಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ, ಇದರ ಬಳಿ ಮನೆ, ಪಂಪು ಶೆಡ್ಡು ಕೂಡ ಇದೆ.

ಶಾಲಾಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು, ಜಾನುವಾರುಗಳು ನಡೆದುಕೊಂಡು ಹೋಗುವ ದಾರಿಯಾಗಿದ್ದು, ಮರಬಿದ್ದರೆ ತಂತಿ ಮೇಲೆಯೇ ಬೀಳುತ್ತದೆ, ಒಂದು ವೇಳೆ ಬಿದ್ದರೆ ನಾಲ್ಕರಿಂದ ಐದು ವಿದ್ಯುತ್ ಕಂಬಗಳು ಮುರಿದು ಬೀಳಬಹುದು. ಆದುದರಿಂದ ಮೆಸ್ಕಾಂ ಇಲಾಖೆಯವರು ಎಚ್ಚೆತ್ತುಕೊಂಡು ಮರ ತೆರವುಗೊಳಿಸದಿದ್ದರೆ ಅಪಾಯವನ್ನು ಅಹ್ವಾನ ಮಾಡಿದಂತಾಗುವುದಿಲ್ಲವೇ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

p>

LEAVE A REPLY

Please enter your comment!
Please enter your name here