ಕುವೆಟ್ಟು: ಮದ್ದಡ್ಕ ಆಲಂದಿಲ ಸಬರಬೈಲು ಸಂಪರ್ಕ ರಸ್ತೆಯ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಸಂಚಾರಕ್ಕೆ ತೊಡಕಾಗಿದೆ.
ಈ ಪರಿಸರದಲ್ಲಿ ಚಿಕ್ಕದಾದ ಕಾಲು ಸಂಕ ಇದ್ದು ರಸ್ತೆಯ ಎರಡು ಬದಿಯಲ್ಲಿ ಚರಂಡಿಯಲ್ಲಿ ಮಣ್ಣು ತಂಬಿದ್ದು ಸರಾಗವಾಗಿ ಹರಿದು ಹೋಗಬೇಕಾಗಿದ್ದ ನೀರು ಚರಂಡಿಯಲ್ಲಿ ಮಣ್ಣು ತುಂಬಿ ಈಗ ರಸ್ತೆಯಲ್ಲಿ ಹರಿದು ಹೋಗುತ್ತಿದೆ.
ಸಮೀಪದಲ್ಲಿ ಮದರಸ ಇದ್ದು ಚಿಕ್ಕ ಚಕ್ಕ ಮಕ್ಕಳು ಸ್ಥಳೀಯ ಶಾಲೆಗೆ ಹೋಗುವ ಮಕ್ಕಳು ಈ ರಸ್ತೆಯಲ್ಲಿ ಸಾಗಬೇಕಾಗಿದೆ.ರಸ್ತೆಯು ಮೂಡಬಿದ್ರೆ ಕಡೆ ಸಾಗುವ ಪ್ರಯಾಣಿಕರು ಪಡಂಗಡಿ ಪೊಯ್ಯೆಗುಡ್ಡೆ ಸಂಪರ್ಕವಾಗಿ ಹೆಚ್ಚಿನ ವಾಹನಗಳು ಈ ರಸ್ತೆಯನ್ನು ಅವಲಂಬಿಸಿದ್ದು, ಕಿರಿದಾದ ಈ ರಸ್ತೆಯಲ್ಲಿ ಎದುರು ಕಡೆಯಿಂದ ಬರುವ ವಾಹನಗಳಿಗೆ ಸೈಡ್ ಕೊಡಲು ನಿಲ್ಲಿಸಿಯೇ ಹೋಗುವ ಅನಿವಾರ್ಯಕ್ಕೆ ವಾಹನ ಚಾಲಕರು ಸಿಲುಕಿದ್ದಾರೆ.
ಇದಕ್ಕೆ ಸಂಂಭದಿಸಿದಂತೆ ಇಲಾಖೆ, ಜನಪ್ರತಿನಿಧಿಗಳು ಗಮನ ಹರಿಸಿ, ಶೀಘ್ರವಾಗಿ ಇದಕ್ಕೆ ಸ್ಪಂದನೆ ನೀಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
p>