ಆರಂಬೋಡಿ: ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರವೀಣಶ್ಚಂದ್ರ ಜೈನ್, ಉಪಾಧ್ಯಕ್ಷರಾಗಿ ತೇಜಸ್ವಿನಿ ಅವಿರೋಧ ಆಯ್ಕೆ

0

ಆರಂಬೋಡಿ: ಆರಂಬೋಡಿ ಗ್ರಾಮ ಪಂಚಾಯತಿನ 2ನೇ ಅವಧಿಗೆ ಬಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ಪ್ರವೀಣಶ್ಚಂದ್ರ ಜೈನ್ ಮತ್ತು ಉಪಾಧ್ಯಕ್ಷರಾಗಿ ತೇಜಸ್ವಿನಿ ಅವಿರೋಧವಾಗಿ ಆಯ್ಕೆಯಾದರು.

ಇವರಿಬ್ಬರೂ ಬಿಜೆಪಿ ಬೆಂಬಲಿತರು.ಪಂಚಾಯತಿನ ಅಧ್ಯಕ್ಷ ಉಪಾಧ್ಯಕ್ಷ ಮೊದಲ ಅವಧಿ ಕೊನೆಗೊಂಡಿದ್ದು 2ನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷರು ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾಗಿದೆ. ಇಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದು ಭಾರತೀಯ ಜನತಾ ಪಕ್ಷ ಬೆಂಬಲಿತ 8 ಮಂದಿ ಮತ್ತು ಕಾಂಗ್ರೆಸ್ ಬೆಂಬಲಿತ 4 ಮಂದಿ ಸದಸ್ಯರಿದ್ದಾರೆ.

ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಪ್ರಕ್ರಿಯೆ ನಡೆಸಿದರು. ಪಂಚಾಯತ್ ಆಡಳಿತಾಧಿಕಾರಿ ಪಶು ವೈದ್ಯಾಧಿಕಾರಿ ರವಿ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ.ಸ್ಮೃತಿ, ನಿಕಟ ಪೂರ್ವ ಅಧ್ಯಕ್ಷೆ ವಿಜಯ, ಪಂಚಾಯತ್ ಸದಸ್ಯರು ಹಾಜರಿದ್ದರು.

ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here