ಶಿಶಿಲ: ಗಿರಿಜನ ಕಾಲೋನಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದಲ್ಲಿ ಮಕ್ಕಳಿಗೆ ಕಲಿಕೆ ಪ್ರಾರಂಭ- ಸ್ಥಾಪಕ ಕಾರ್ಯಕರ್ತೆ ನೀಲಮ್ಮರಿಗೆ ಸನ್ಮಾನ

0

ಶಿಶಿಲ: ಗಿರಿಜನ ಕಾಲೋನಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರ ಇದುವರೆಗೆ ಹಳೆಯ ಕಟ್ಟಡದಲ್ಲಿ ನಡೆಸುತ್ತಿದ್ದು.ಈಗ ನೂತನ ಕಟ್ಟಡ ನಿರ್ಮಾಣ ಗೊಂಡಿದ್ದು ಮಕ್ಕಳಿಗೆ ನೂತನ ಕಟ್ಟಡದಲ್ಲಿ ಕಲಿಕೆ ಪ್ರಾರಂಭ ಗೊಂಡಿದ್ದು ಊರಿನವರ ಸಮಸ್ತಮದಲ್ಲಿ ಪ್ರಾರಂಭದ ದಿನ ಶುಭಾರಂಭ ಕಾರ್ಯಕ್ರಮ ಏರ್ಪಡಿಸಿ ಅಂಗನವಾಡಿಯ ಸ್ಥಾಪಕ ಕಾರ್ಯಕರ್ತೆಯಾಗಿ 1986ರಿಂದ 1991ರವರೆಗೆ ಸೇವೆ ಸಲ್ಲಿಸಿದ ನೀಲಮ್ಮರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶಿಲ ಗ್ರಾ.ಪಂ ಅಧ್ಯಕ್ಷ ಸುಧಿನ್ ಡಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷ ಯಶೋಧರ ಕೆ ವಿ, ಶಿಶಿಲ ಬ್ಯಾಂಕ್ ಆಫ್ ಬರೋಡ ಪ್ರಬಂಧಕಾರ ರಾಕೇಶ್ ನಾಯ್ಕ್ ಗ್ರಾಮ ಪಂಚಾಯತ್ ಸದಸ್ಯರಾದ ಕಮಲಾಕ್ಷಿ, ಲಲಿತ, ತಾ.ಪಂ ಮಾಜಿ ಸದಸ್ಯರಾದ ಚೇತನ ಚಂದ್ರಶೇಖರ್, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ರೇವತಿ ಉಪಸ್ಥಿತರಿದ್ದರು.

ಬಾಲವಿಕಾಸ ಸಮಿತಿ ಸದಸ್ಯರು, ವಾಲ್ಮೀಕಿ ಶಾಲಾ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿ ಗಳು, ಪೋಷಕರು, ಗ್ರಾಮಸ್ಥರು, ಯುವಕ ಮಂಡಲ ಸದಸ್ಯರು, ಸ್ತ್ರೀ ಶಕ್ತಿ ಒಕ್ಕೂಟ, ಸಂಜೀವಿನಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಸಹಾಯಕಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಅಂಗನವಾಡಿ ಕಾರ್ಯಕರ್ತೆ ಯಶೋದಾ ಸ್ವಾಗತಿಸಿ ಧನ್ಯವಾದವಿತ್ತರು.

ರಮೇಶ ಬೈರಕಟ್ಟ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here