ಬೆಳ್ತಂಗಡಿ: ಎಲ್ ಸಿ ಆರ್ ವಿದ್ಯಾಸಂಸ್ಥೆ ಯಲ್ಲಿ ವಿದ್ಯಾರ್ಥಿಸಂಘದ ಉದ್ಘಾಟನಾ ಕಾರ್ಯಕ್ರಮವು ಜು. 10ರಂದು ನಡೆಯಿತು. ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಪ್ರಾಂಶುಪಾಲ, ಸಂಯೋಜಕರು, ಮುಖ್ಯಶಿಕ್ಷಕಿ ಆಯ್ಕೆಯಾದ ಶಾಲಾ ಸಚಿವರಿಗೆ ಬ್ಯಾಡ್ಜ್ ಗಳನ್ನು ವಿತರಿಸಿದರು.
ಶಾಲೆಯ ನಾಯಕನಾಗಿ 10ನೇ ತರಗತಿಯ ಅಭಿನಯ್, ಉಪನಾಯಕಿಯಾಗಿ 9ನೇ ತರಗತಿಯ ಮನಸ್ವಿನಿ ಕೆ, ಶಿಕ್ಷಣ ಮಂತ್ರಿಗಳಾಗಿ ಪ್ರಾರ್ಥನಾ ಎಚ್ ಕೆ ಮತ್ತು ಮಹಮ್ಮದ್ ಶಾಹಿಲ್ ಬಿ , ಶಿಸ್ತಿನ ಮತ್ತು ಆರೋಗ್ಯ ಮಂತ್ರಿಗಳಾಗಿ ಅಭಿಜ್ಞಾ ಮತ್ತು ಫಾತಿಮಾತ್ ಶಹಿಮಾ, ಕ್ರೀಡಾ ಮಂತ್ರಿಗಳಾಗಿ ಅತಿಶಯ್ ಮತ್ತು ಸಾನ್ವಿತ್ ಕೆ, ಸಾಂಸ್ಕೃತಿಕ ಮಂತ್ರಿಗಳಾಗಿ ಶ್ರಾವ್ಯ ಜೆ.ವಿ. ಮತ್ತು ಸುದೀಕ್ಷಾ ಹಾಗೂ ಗುಂಪಿನ ಪ್ರತಿನಿಧಿಗಳಾದ ನಿಶಾ,ಸಮೃದ್ಧ ಕೆ, ಪ್ರೀತಮ್ ಸಾಲಿಯನ್, ಚಿಂತನ್ ಪಿ. ಇವರಿಗೆ ಸಹ ಶಿಕ್ಷಕಿಯಾದ ಸಂಗೀತ ಇವರು ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು.
ಪ್ರಮಾಣವಚನ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾದ ವಿಜಯ ಕೆ ತಿಳಿಸಿದರು. ಶಾಲಾ ಪ್ರಾಂಶುಪಾಲ ಜೋಸ್ಟನ್ ಲೋಬೊ ಆಯ್ಕೆಯಾದ ಸಚಿವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಶಾಲಾ ಹಂತದಲ್ಲಿಯೇ ನಾಯಕತ್ವದ ಗುಣವನ್ನು ಬೆಳೆಸಬೇಕು ಎಂದು ಹೇಳಿದರು. ಸಂಸ್ಥೆಯ ಸಂಯೋಜಕ ಯಶವಂತ್ ಜಿ. ನಾಯಕ್ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ಬೋಧಕೇತರ ವರ್ಗ ಉಪಸ್ಥಿತಿಯಲ್ಲಿದ್ದರು. ಫಾತಿಮತ್ ಮುಝೈನಾ ಸ್ವಾಗತಿಸಿ, ಅನ್ವಿತಾ ಮತ್ತು ಫಾತಿಮಾ ಶಿಫಾ ಕಾರ್ಯಕ್ರಮ ನಿರೂಪಿಸಿ ಕೀರ್ತನಾ ವಂದಿಸಿದರು.