ಪೆರಾಡಿ: ಖುವ್ವತುಲ್ ಇಸ್ಲಾಂ ಮದ್ರಸ ಪೆರಾಡಿ ಇದರ ವತಿಯಿಂದ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ಇದರ ನಿರ್ದೆಶನದಂತೆ ನಡೆಸಲ್ಪಡುವ ಮುಅಲ್ಲಿಂ ಡೇ ಕಾರ್ಯಕ್ರಮ ಹಾಗೂ ರಕ್ಷಕ ಶಿಕ್ಷಕ ಸಭೆ ಜು. 7ರಂದು ನಡೆಯಿತು.
ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಸಲಾಂ ಮರೋಡಿ ಅಧ್ಯಕ್ಷತೆ ವಹಿಸಿದ್ದರು.
ಖತೀಬ ಸಫ್ವಾನ್ ಬಾಖವಿ ಮಾಪಾಲ್ ನೇತೃತ್ವ ವಹಿಸಿದ್ದರು.
ಅಧ್ಯಾಪಕ ಬಹು. ಅಬ್ದುರ್ರಹ್ಮಾನ್ ಫೈಝಿ ನಂದಾವರ ಹಾಗೂ ಊರಿನ ಹಿರಿಯ ಅಬ್ದುಲ್ಲಾಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಖತೀಬರು ಸೇರಿದಂತೆ ಅಧ್ಯಾಪಕರನ್ನು ಶಾಲು ಹೊದಿಸಿ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
SKSBV ಮೂಡುಬಿದಿರೆ ರೇಂಜ್ ವರ್ಕಿಂಗ್ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಂಟನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಸಫೀರ್ ಇವರನ್ನು ಜಮಾಅತ್ ಆಡಳಿತ ಸಮಿತಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಜಮಾಅತ್ ಆಡಳಿತ ಸಮಿತಿ ಸದಸ್ಯರು, ಜಮಾಅತ್ ಬಾಂಧವರು, ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.