ಬೆಳ್ತಂಗಡಿ: ಶಿಬಾಜೆ ಘಟನೆ ನಡೆದ ಜಾಗದಲ್ಲಿ ಸಮಸ್ಯೆ ಇರುವ ಬಗ್ಗೆ ಮೆಸ್ಕಾಂ ಅಧಕಾರಿಗಳಿಗೆ ಒಂದೆರಡು ಬಾರಿ ದೂರು ನೀಡಿದರೂ ಸಮರ್ಪಕವಾಗಿ ಸ್ಪಂದಿಸಿಲ್ಲ.
ಇದರಿಂದ ಅಮಾಯಕ ಯುವತಿಯೊಬ್ಬಳು ಜೀವತೆತ್ತಿದ್ದಾಳೆ.
ಒಂದು ವೇಳೆ ದೂರು ನೀಡಿದ್ದರೂ, ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಸಂಸದ ಬ್ರಿಜೇಶ್ ಚೌಟ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜು.5ರಂದು ನಡೆದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಉಲ್ಲೇಖಿಸಿದರು.
ಮೃತರ ಕುಟುಂಬಕ್ಕೆ ಅಧಿಕ ಪ್ರಮಾಣದ ಪರಿಹಾರ ನೀಡಬೇಕು ಎಂದು ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ಶಿಬಾಜೆಯಲ್ಲಿ ಯುವತಿಯೊಬ್ಬಳು ವಿದ್ಯುದಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಗಂಭೀರ ಪ್ರಕರಣವಾಗಿದ್ದು, ಕೂಡಲೇ ಈ ಬಗ್ಗೆ ತನಿಖೆಗೆ ಸಮಿತಿ ರಚಿಸಿ, 10 ದಿನದೊಳಗೆ ನೀಡಬೇಕು.
ಯಾರಾದರೂ ವರದಿಯಲ್ಲಿ ತಪ್ಪಿತಸ್ಥರು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದು ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.