ಅರಸಿನಮಕ್ಕಿ ಪರಿಸರದಲ್ಲಿ ನಿರಂತರ ನೆಟ್ವರ್ಕ್ ಸಮಸ್ಯೆ- ದಿನನಿತ್ಯದ ಡಿಜಿಟಲ್ ವ್ಯವಹಾರಕ್ಕೆ ವಿಪರೀತ ತೊಂದರೆ- ಪೆರ್ಲದಲ್ಲಿ ಬಿಎಸ್ಏನ್ಎಲ್ ಟವರ್ ನಿರ್ಮಾಣಗೊಂಡಿದ್ದರು ಉಪಯೋಗಕ್ಕೆ ಇಲ್ಲ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಪೇಟೆ, ಮುದ್ದಿಗೆ, ಉಪರಡ್ಕ, ಶಿಬರಾಜೆ, ಪೆರ್ಲ ಪರಿಸರದಲ್ಲಿ ಒಂದು ವರ್ಷಗಳಿಂದ ನೆಟ್ವರ್ಕ್ ಸಮಸ್ಯೆಯಿದ್ದು.ಅರಸಿನಮಕ್ಕಿಯಲ್ಲಿ ಮತ್ತು ಶಿಬರಾಜೆಯಲ್ಲಿ ಏರ್ಟೆಲ್ ಹಾಗೂ ಪೆರ್ಲದಲ್ಲಿ ನಿರ್ಮಾಣಗೊಂಡಿರುವ ಬಿಎಸ್ಏನ್ಎಲ್ ಟವರ್ ಇದ್ದು ಅದು ಇನ್ನೂ ಉಪಯೋಗಕ್ಕೆ ಬಿಟ್ಟಿಲ್ಲ.ತಿಂಗಳ ರೀ ಚಾರ್ಜ್ ಮಾಡದೆ ಇದ್ದರೆ‌ ಸೀಮ್ ಡೆಡ್ ಆಗುವ ಉದ್ದೇಶದಿಂದ ಕಂಪೆನಿಯವರು ಸಮರ್ಪಕ ನೆಟ್ವರ್ಕ್ ನೀಡದೆ ಗ್ರಾಮಸ್ಥರ ಹಣವನ್ನು ದೊಚುತ್ತಿದ್ದಾರೆ.

ಇಲ್ಲಿ ಅಂಚೆ ಕಛೇರಿ, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ವಿವಿಧ ಸಂಘ ಸಂಸ್ಥೆಗಳ ಬ್ಯಾಂಕ್ ಹಾಗೂ ವ್ಯಾಪರಸ್ಥರಿಗೂ, ಉದ್ಯೋಗಿಗಳಿಗೆ ವ್ಯವಹಾರದ ಆನ್ ಲೈನ್ ಪೇ ಮಾಡುವುದಕ್ಕೊ ನೆಟ್ವರ್ಕ್ ಸಮಸ್ಯೆಗಳಿಂದ ತೊಂದರೆಗಳಾಗುತ್ತಿದ್ದು ರಿಕ್ಷಾ ಚಾಲಕರಿಗೆ ಅಂತೂ ಪ್ರಾಣ ಸಂಕಟ ತಂದಿಟ್ಟಿದೆ ಆಗತ್ಯ ಕರೆ ಮಾಡಲು ಗುಡ್ಡ ಹತ್ತುವ ಪರಿಸ್ಥಿತಿಯಾಗಿದೆ.ಸಂಬಂಧಪಟ್ಟ ಆಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ. ಇನ್ನೊಮ್ಮೆ ಸಂಬಂಧ ಪಟ್ಟ ಆಧಿಕಾರಿಗಳು ಕೂಡಲೆ ಈ ಪರಿಸರದ ಗ್ರಾಹಕರಿಗಾಗುವ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಅನೇಕ ಕಡೆ ನೆಟ್ವರ್ಕ್ ಸಮಸ್ಯೆ: ಧರ್ಮಸ್ಥಳ ಗ್ರಾಮದ ನಾರ್ಯ, ಡೊಂಡೋಲೆ, ಸುತ್ತ ಮುತ್ತದ ಪರಿಸರದಲ್ಲಿ ದಿನ ನಿತ್ಯ ನೆಟ್ವರ್ಕ್ ಇಲ್ಲದೆ ವಿದ್ಯಾರ್ಥಿಗಳು ವ್ಯಾಪಾರಸ್ಥರು ರಿಕ್ಷಾ ಚಾಲಕರು, ಪ್ರತಿಯೊಬ್ಬರೂ ಪರದಾಡುವ ಪರಿಸ್ಥಿತಿ ಎದುರಾಗಿದೆ.

p>

LEAVE A REPLY

Please enter your comment!
Please enter your name here