ಧರ್ಮಸ್ಥಳ: ಕರ್ನಾಟಕ ಗಮಕ ಕಲಾ ಪರಿಷತ್, ಬೆಳ್ತಂಗಡಿ ಇದರ ವತಿಯಿಂದ ಮನೆ ಮನೆ ಗಮಕ ಎನ್ನುವ ವಿನೂತನ ಕಾರ್ಯಕ್ರಮವು ತುಳು ಶಿವಳ್ಳಿ ಸಭಾ, ಧರ್ಮಸ್ಥಳ ವಲಯದ ಗೌರವಧ್ಯಕ್ಷ ಗಿರೀಶ ಕುದ್ರೆoತಾಯರ ಶಿವ ಪಾರ್ವತಿ ಕೃಪಾದಲ್ಲಿ ನಡೆಯಿತು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೋ.ಮಧೂರು ಮೋಹನ ಕಲ್ಲುರಾಯ, ತಾಲೂಕು ಅಧ್ಯಕ್ಷ ರಾಮಕೃಷ್ಣ ಭಟ್, ನಿನ್ನಿಕಲ್ಲು, ಹಿರಿಯ ಯಕ್ಷಗಾನ ಧೂರಿಣ ಭುಜಬಲಿ, ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ಅಧ್ಯಕ್ಷ ಡಾ.ಶ್ರೀಪತಿ ಅಂರ್ಮುಡತ್ತಾಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಪಡುವೆಟ್ನಾಯ, ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳು, ಗಿರೀಶ ಕುದ್ರೆoತಾಯರ ಕುಟುಂಬ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಮಕ ವಾಚನವನ್ನು ಜಯರಾಮ ಕುದ್ರೆoತಾಯರು, ವ್ಯಾಖ್ಯಾನವನ್ನು ಹಿರಿಯ ಕಲಾವಿದರಾದ ಸುರೇಶ ಕುದ್ರೆoತಾಯರು ಬಹಳ ರಸವತ್ತಾಗಿ ನಿರ್ವಹಿಸಿದರು. ಇವರ ಜೊತೆ ಉಡುಪಿಯರವರು ವ್ಯಾಖ್ಯಾನ ಕಾರರಾಗಿ ಜೊತೆಯಾದದ್ದು ವಿಶೇಷವಾಗಿತ್ತು. ಕೊನೆಯಲ್ಲಿ ಎಲ್ಲರಿಗೂ ಫಲಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಮಕೃಷ್ಣ ಭಟ್ ಸ್ವಾಗತಿಸಿ, ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಪಡುವೆಟ್ನಯರು ಧನ್ಯವಾದವಿತ್ತರು. ಇದೇ ಸಂದರ್ಭದಲ್ಲಿ ವಾಚನ, ಪ್ರವಚನ ಕಾರರನ್ನು ಹಾಗೂ ಜಿಲ್ಲಾಧ್ಯಕ್ಷರನ್ನು ಶಾಲು ಹಾಕಿ ಗೌರವಿಸಲಾಯಿತು.