ಗುರುವಾಯನಕೆರೆ: ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಕಾರ್ಯಕ್ರಮವನ್ನು ತಾಲೂಕು ಪರಿಷತ್ ಕಾರ್ಯದರ್ಶಿಗಳಾದ ಚಂದ್ರಶೇಖರ ಸಾಲ್ಯಾನ್ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ, ಭಜನಾ ಮಂಡಳಿಗಳ ಮೂಲಕ ನಮ್ಮ ಧರ್ಮ ರಕ್ಷಣೆ ಮಾಡಲು ಸಾಧ್ಯ.ಸಂಸ್ಕೃತಿ ಸಂಸ್ಕಾರ ಬೆಳೆಸಲು ಭಜನಾ ಮಂಡಳಿಗಳು ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಅಪೇಕ್ಷೆಯಂತೆ ಪ್ರತಿ ಮನೆ ಮನೆಗಳಲ್ಲೂ ಭಜನೆಯ ಮುಖಾಂತರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ.ಮಕ್ಕಳಿಗೆ ಕುಳಿತು ಭಜನೆ ಹೇಳುವುದನ್ನು ಕಲಿಸಿವುದರೊಂದಿಗೆ ಎಳವೆಯಿಂದಲೇ ಮನಸ್ಸು ಅರಳಬೇಕು ಹೊರತು ಕೆರಳಬಾರದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು ಎಂದರು.
ಬೆಳ್ತಂಗಡಿ ತಾಲೂಕು ಭಜನಾ ತರಬೇತುದಾರರ ಸಂಘದ ಅಧ್ಯಕ್ಷ ಸಂದೇಶ್ ಮದ್ದಡ್ಕರವರು ಮಂಡಳಿಗಳ ಗುಣಮಟ್ಟವನ್ನು ಗಟ್ಟಿಗೊಳಿಸುವ ಮೂಲಕ ವಲಯ ಪರಿಷತ್ ಸದೃಢವಾಗಿ ಬೆಳೆಯಬೇಕು ಎಂದರು.ವಲಯಾಧ್ಯಕ್ಷೆಯಾಗಿ ಮೀನಾಕ್ಷಿ, ಉಪಾಧ್ಯಕ್ಷರಾಗಿ ಪ್ರಕಾಶ್ ಕಾಮತ್, ವಿಜಯ್ ಸಾಲ್ಯಾನ್, ಕಾರ್ಯದರ್ಶಿಯಾಗಿ ಪ್ರಿಯದರ್ಶಿನಿ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಧರ್ ಅಂಚನ್, ಸುಮಿತ್ರಾ, ಕೋಶಾಧಿಕಾರಿಯಾಗಿ ದಯಾನಂದ ರವರು ಆಯ್ಕೆಯಾದರು.
ಭಜನಾ ಮಂಡಳಿಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.ವಲಯ ಮೇಲ್ವಿಚಾರಕಿ ಯಶೋದಾ ಕಾರ್ಯಕ್ರಮ ನಿರೂಪಿಸಿದರು, ಫೆಲ್ಸಿಟಾ ಮೊರೈಸ್ ಸ್ವಾಗತಿಸಿದರು, ಭಾರತಿ ವಂದಿಸಿದರು.