ಶಿಶಿಲ: ಜಿಲ್ಲಾಧಿಕಾರಿಯವರ ಆದೇಶದಂತೆ ಶಿಶಿಲ ಗ್ರಾಮ ಪಂಚಾಯತಿಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ಸಭೆಯು ಜೂನ್ 28ರಂದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಸಲಾಯಿತು.ಗ್ರಾಮದಲ್ಲಿ ಇರುವ ಸಮಸ್ಯೆಗಳ ಪಟ್ಟಿಮಾಡಿ ಇಲಾಖೆಗಳಿಗೆ ಮಾಹಿತಿ ನೀಡಿ ಇಲಾಖೆಗಳಿಂದ ತಕ್ಷಣ ಕ್ರಮಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದ ವಿಪತ್ತು ನಿರ್ವಹಣಾ ಸಭೆಯಲ್ಲಿ ನಿರ್ಧರಿಸಲಾಯಿತು.
ವಿಪತ್ತು ನಿರ್ವಹಣಾ ತಂಡ ದ ಸದಸ್ಯರು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ತಂಡದ ಸಭೆಯಲ್ಲಿ ಸೂಚಿಸಲಾಯಿತು.ಗ್ರಾಮದಲ್ಲಿ ಇರುವ ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳನ್ನು ತೆರವುಗೊಳ್ಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ದಿನೇಶ್ ಎಂ, ಗ್ರಾಮ ಆಡಳಿತಾಧಿಕಾರಿ ತೇಜಸ್ವಿ, ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶಶಿಧರ್, ಸಂದೀಪ್, ಗಸ್ತು ಅರಣ್ಯ ಪಾಲಕ ನಾಗಲಿಂಗ ಬಡಿಗೇರ, ಕೊಳಕ್ಕೆ ಬೈಲು ಶಾಲಾ ಮುಖ್ಯೋಪಾಧ್ಯಾಯ ರೊನಾಲ್ಡ್ ಮಿನೇಜಸ್, ಹೆವಾಜೆ ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್, ಆಶ್ರಮ ಶಾಲಾ ಅಧ್ಯಾಪಕ ಕರುಣಾಕರ, ಸಮುದಾಯ ಆರೋಗ್ಯ ಅಧಿಕಾರಿ ಪವಿತ್ರ, ಅಂಗನವಾಡಿ ಕಾರ್ಯಕರ್ತೆಯರಾದ ಯಶೋದಾ, ಕುಸುಮಾವತಿ, ನಯನ ಕುಮಾರಿ, ಆಶಾ ಕಾರ್ಯಕರ್ತೆ ರೂಪ, ಸಂಜೀವಿನಿ ಒಕ್ಕೂಟದ ಎಂಬಿಕೆ ಶಾರದಾ, ಎಲ್ ಸಿ ಆರ್ ಪಿ ಶಶಿ, ಕೃಷಿ ಸಖಿ ವಸಂತಿ, ಪಶು ಸಖಿ ಆಶಿಕಾ, ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರಾದ ಕಿರಣ್, ಗಂಗಾಧರ, ಅವಿನಾಶ್ ಭಿಡೆ ಯುವಕ ಮಂಡಲ ಸದಸ್ಯ ಪದ್ಮನಾಭ, ರಾಧಾಕೃಷ್ಣ ಗೌಡ ಗುತ್ತು ಮುಂತಾದವರು ಭಾಗವಹಿಸಿದ್ದರು