ಅಳದಂಗಡಿ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಕೊಠಡಿ ಮತ್ತು ಇತರ ಮೂಲಭೂತ ಸೌಕರ್ಯಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಭವನದಲ್ಲಿ ಜೂ.26ರಂದು ನಡೆಯಿತು.
ರೋಟರಿ ಕ್ಲಬ್ ಆಫ್ ಬೆಂಗಳೂರು ಮತ್ತು ಕೊಲೀನ್ಸ್ ಆ್ಯರೋಸ್ಪೇಸ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಸುಮಾರು 40 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆದಿರುತ್ತದೆ.ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಇವರು ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಕೋಲೀನ್ಸ್ ಏರೋಸ್ಪೇಸ್ ಸಿಎಸ್ಆರ್ ನಿಧಿಯಿಂದ ನಿರ್ಮಾಣದವಾದಂತ ಈ ಪ್ರಾಜೆಕ್ಟ್ ಅಳದಂಗಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಕಾರಿಯಾಗಿದೆ ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಂಪೆನಿಯ ಸಿಎಸ್ಆರ್ ಲೀಡ್ ಅಮಿತ್ ಸಾವರ್ಕರ್ ಇವರು ವಿಜ್ಞಾನ ಕೊಠಡಿಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಲಿಕೆಯಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ಜವಾಬ್ದಾರಿಯುತ ವ್ಯಕ್ತಿಗಳಾಬೇಕು ಎಂದರು ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕಂಪನಿಯ ಎಚ್ ಆರ್ ಸೀನಿಯರ್ ಮೆನೇಜರ್ ನವೀನ್ ಶೆಟ್ಟಿ, ರೋಟರಿ ಕ್ಲಬ್ ಆಫ್ ಬೆಂಗಳೂರಿನ ರೊಟೇರಿಯನ್ ಮಂಜುನಾಥ್ ಆನೇಕರ್, ರೊಟೇರಿಯನ್ ರಂಗರಾವ್ ರೊಟೇರಿಯನ್ ಛಲಮಣಿ ಕರ್ನಾಟಕ ಸರ್ಕಾರದ ಉಪ ಕಾರ್ಮಿಕ ಆಯುಕ್ತರ ಗುರುಪ್ರಸಾದ್ ಎಚ್ ಎಲ್, ಸಿ ಬಿ ಸಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಾಂತಿಮರಿಯ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಸನ್ನಿ ಕೆಎಂ ರವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ನುಡಿದರು.ಈ ಸಂದರ್ಭದಲ್ಲಿ ಸಹಕರಿಸಿದ ಕೊಲೀನ್ ಏರೋಸ್ಪೇಸ್ ಮತ್ತು ರೋಟರಿ ಕ್ಲಬ್ ಅಫ್ ಬೆಂಗಳೂರು ಇದರ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ಜೀವಶಾಸ್ತ್ರ ಉಪನ್ಯಾಸಕ ಪ್ರಶಾಂತ್ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.