ಮಡಂತ್ಯಾರು: ಬೆಳ್ತಂಗಡಿ ಕಥೋಲಿಕ್ ಸಭಾದ ವಲಯ ಮಟ್ಟದ ಲಾವುದಾತೋಸಿ ಎಂಬ ಪರಿಸರ ದಿನ ಆಚರಣೆ

0

ಮಡಂತ್ಯಾರು: ಬೆಳ್ತಂಗಡಿ ಕಥೋಲಿಕ್ ಸಭಾದ ವಲಯ ಮಟ್ಟದ ಲಾವುದಾತೋಸಿ ಎಂಬ ಪರಿಸರ ದಿನ ಆಚರಣೆ ಮಾಡಲಾಯಿತು.

ವಲಯದ 12 ಚರ್ಚ್ ಗಳಿಂದ ಕಥೊಲಿಕ್ ಸಭೆಯ ಅಧ್ಯಕ್ಷರು, ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಆತ್ಮೀಕ ನಿರ್ದೇಶಕ ವಂ.ಗುರುಗಳು ಸ್ಟೇನಿ ಗೋವಿಯಸ್, ವಲಯ ಅಧ್ಯಕ್ಷ ಲಿಯೋ ರೋಡ್ರಿಗಸ್, ಕಾರ್ಯದರ್ಶಿ ಫಿಲಿಪ್ ಕುನ್ಹಾ, ಕೋಶಾಧಿಕಾರಿ ಅರುಣ್ ಫೆರ್ನಾಂಡಿಸ್, ನಿಕಟ ಪೂರ್ವ ಅಧ್ಯಕ್ಷರು ಎಡ್ವರ್ಡ್, ಘಟಕದ ಅಧ್ಯಕ್ಷ ಸೆಲೆಸ್ಟಿನ್ ಡಿ’ಸೋಜಾ ಉಪಸ್ಥಿತರಿದ್ದರು.ಆತ್ಮೀಕ ನಿರ್ದೇಶಕರು ಪರಿಸರದ ವಿಷಯದಲ್ಲಿ ಸಾಕಷ್ಟು ಮಾಹಿತಿ ನೀಡಿ, ವಿವಿಧ ಬಗೆಯ ಗಿಡಗಳನ್ನು ಗಣ್ಯರಿಗೆ ಹಾಗೂ ಪಾಲ್ಗೊಂಡ ಪ್ರತಿ ಒಬ್ಬರಿಗೂ ವಿತರಿಸಿ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ನಡೆಸಲಾಯಿತು.

ಕಾರ್ಯದರ್ಶಿ ಫಿಲಿಪ್ ಡಿಕುನ್ಹಾ ಧನ್ಯವಾದಗೈದರು.

LEAVE A REPLY

Please enter your comment!
Please enter your name here