ವಿಭಿನ್ನತೆಯೊಂದಿಗೆ ಮಾಯ ಶಾಲಾ ಸಂಸತ್ ಚುನಾವಣೆ- ಮುಖ್ಯಮಂತ್ರಿಯಾಗಿ ಚರಣ್ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಶ್ರವಣ್ ಪಿ 7ನೇ ತರಗತಿ ಆಯ್ಕೆ

0

ಬೆಳಾಲು: ಕಳೆದ ಶೈಕ್ಷಣಿಕ ವರ್ಷದಲ್ಲಿ ಐದು ಮೊಬೈಲ್ ಇವಿಎಂ ಜೋಡಣೆಯೊಂದಿಗೆ ಶಾಲಾ ಸಂಸತ್ತು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದ ಮಾಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ಗೂಗಲ್ ಫಾರ್ಮ್ ಬಳಸಿ ಆನ್ಲೈನ್ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿದೆ. ಶಾಲಾ ಚುನಾವಣೆಯ ಅಧಿಸೂಚನೆಯಂತೆ ಜೂ 22ರಂದು ಶಾಲಾ ಸಂಸತ್ತಿಗೆ ಚುನಾವಣೆ ನಡೆದಿದ್ದು, ಮುಖ್ಯಮಂತ್ರಿಯಾಗಿ ಚರಣ್ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಶ್ರವಣ್ ಪಿ 7ನೇ ತರಗತಿ, ಗೃಹಮಂತ್ರಿಯಾಗಿ ಕಾರ್ತಿಕ್ ಎಂ.ಎನ್ 8ನೇ ತರಗತಿ ವಿದ್ಯಾಮಂತ್ರಿಯಾಗಿ ಸುಷ್ಮಾ 8ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ಸೃಜನ್ಯ 8ನೇ ತರಗತಿ, ಆರೋಗ್ಯ ಮಂತ್ರಿಯಾಗಿ ಭವಿಕಾ ಪಿ 7ನೇ ತರಗತಿ, ತೋಟಗಾರಿಕಾ ಮಂತ್ರಿಯಾಗಿ ವರುಣ್ 8ನೇ ತರಗತಿ, ನಿರಾವರಿ ಮಂತ್ರಿಯಾಗಿ ಅಭಿಲಾಶ್ 8ನೇ ತರಗತಿ, ಆಹಾರ ಮಂತ್ರಿಯಾಗಿ ಶಶಿಧರ 7ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಶ್ರಾವ್ಯ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಶೈಲೇಶ್ 6ನೇ ತರಗತಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ಸುಜನ್ 8ನೇ ತರಗತಿ ಆಯ್ಕೆಯಾಗಿದ್ದಾರೆ.

ಈ ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯಶಿಕ್ಷಕ ವಿಠಲ್ ಎಂ ಮುಖ್ಯ ಚುನಾವಣಾಧಿಕಾರಿಯಾಗಿ, ಸಹ ಶಿಕ್ಷಕಿ ಜ್ಯೋತಿ ಎಂ.ಎಸ್ , ಜಾನ್ಸಿ ಸಿ.ವಿ, ಸುಪ್ರಿಯಾ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.ಅತಿಥಿ ಶಿಕ್ಷಕರಾದ ಪ್ರಜ್ಞಾ ಹಾಗೂ ಗೌರವ ಶಿಕ್ಷಕ ಗುರುಪ್ರಸನ್ನ ಚುನಾವಣಾ ಕಾರ್ಯಕ್ಕೆ ಸಹಕರಿಸಿದರು.

ಚುನಾವಣಾ ಉಸ್ತುವಾರಿ ಶಿಕ್ಷಕ ಯೋಗೇಶ ಹೆಚ್.ಆರ್ ಆನ್ಲೈನ್ ಮತದಾನ ಪ್ರಕ್ರಿಯೆಯ ನಿರ್ವಹಣೆಯೊಂದಿಗೆ ಅದರ ಸಾಧಕ ಬಾಧಕಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ, ಭಾರತದ ಚುನಾವಣಾ ಆಯೋಗದ ಇವಿಎಂ ಯಂತ್ರಗಳ ಸದೃಢತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಲಾ ಸಂಸತ್ತಿನ ನೂತನ ಮಂತ್ರಿಗಳಿಗೆ ಜೂ. 24ರಂದು ಮುಖ್ಯ ಶಿಕ್ಷಕರು ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here