

ಉಜಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಮೂಡಬಿದ್ರೆ ಇವರು ನಡೆಸಿದ ರಾಜ್ಯಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ. ನ್ಯಾಚುರೋಪತಿ ಕಾಲೇಜು ತಂಡವು ಚಾಂಪಿಯನ್ ಆಗಿ ಮೂಡಿ ಬಂದಿದೆ.
ಸೆಮಿಫೈನಲ್ ಪಂದ್ಯಾಟದಲ್ಲಿ ಮೂಡಬಿದ್ರೆಯ ಆಳ್ವಾಸ್ ನ್ಯಾಚುರೋಪತಿ ತಂಡವನ್ನು 27-18ರಿಂದ ಮಣಿಸಿ, ಫೈನಲ್ ಪಂದ್ಯಾಟದಲ್ಲಿ ಸಜ್ಜಲ ಶ್ರೀ ನರ್ಸಿಂಗ್ ಕಾಲೇಜ್ ಬೆಳಗಾವಿ ತಂಡವನ್ನು 24-11ರಿಂದ ಸೋಲಿಸಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಈ ಪಂದ್ಯಾಟದ ಬೆಸ್ಟ್ ರೈಡರ್ ಆಗಿ ಉಜಿರೆಯ ನ್ಯಾಚುರೋಪತಿ ತಂಡದ ಮಾನಸ ಹಾಗೂ ಬೆಸ್ಟ್ ಕ್ಯಾಚರ್ ಆಗಿ ಪ್ರಗತಿ ಮೂಡಿಬಂದಿದ್ದಾರೆ.ಇವರಿಗೆ ಕಾಲೇಜಿನ ದೈಹಿಕ ನಿರ್ದೇಶಕ ಧರ್ಮೇಂದ್ರ ಕುಮಾರ್ ತರಬೇತಿ ನೀಡಿರುತ್ತಾರೆ.