ಉಜಿರೆ: ಅನುಗ್ರಹ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜೂ.22ರಂದು ಅನುಗ್ರಹ ಸಭಾಭವನದಲ್ಲಿ ಜರಗಿತು. ಈ ಕಾರ‍್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ.ಫಾ.ಅಬೆಲ್ ಲೋಬೊ, ಮುಖ್ಯ ಆತಿಥಿಯಾಗಿ ಎಸ್.ಡಿ.ಎಮ್ ಕಾಲೇಜಿನ ಗ್ರಂಥಾಪಾಲಕ ಎಚ್.ಇ ಯೋಗೆಶ್ ಇವರು ಉಪಸ್ಥಿತರಿದ್ದರು.
ಹೊಸದಾಗಿ ಆಯ್ಕೆಯಾದ ಶಾಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಮಂತ್ರಿ ಮಂಡಲದ ನೂತನ ಸದಸ್ಯರಿಗೆ ಶಾಲಾ ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೋ ಇವರು ಪ್ರಮಾಣ ವಚನವನ್ನು ಭೋಧಿಸಿದರು.
ಪ್ರೌಢಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕು.ಗಾಯನ, ಉಪನಾಯಕನಾಗಿ ಜೋಶ್ವ ಜಾನ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಶಾಶ್ವತ್ ರಾವ್ ಎಸ್, ಉಪನಾಯಕಿಯಾಗಿ ಕು.ಪ್ರತೀಕ್ಷಾ, ಹಾಗೂ ಇವರ ಜೊತೆಯಲ್ಲಿ ಮಂತ್ರಿ ಮಂಡಲದ ಇತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಯುವ ನಾಯಕತ್ವದ ಬಧ್ದತೆ, ಕರ್ತವ್ಯ ಹಾಗೂ ಅದರ ಅಗತ್ಯದ ಬಗ್ಗೆ ಮತ್ತು ಶಾಂತಿ ಸೌಹರ್ಧತೆಯಿಂದ ರಾಷ್ಟ್ರಭಿಮಾನವನ್ನು ಮೈಗೂಡಿಸಿ ಇಂದಿನ ಯುವ ಪೀಳಿಗೆ ಬೆಳೆಯಬೇಕಾಗಿದೆ ಎಂದು ವಂ.ಫಾ.ಅಬೆಲ್ ಲೋಬೊ, ಮುಖ್ಯ ಆತಿಥಿಯಾದ ಎಚ್.ಇ ಯೋಗೆಶ್ ತಿಳಿಸಿದರು. ಪ್ರಾಂಶುಪಾಲ ವಂ.ಫಾ.ವಿಜಯ್ ಲೋಬೋ ಇವರು ಮಂತ್ರಿ ಮಂಡಲದ ಸದಸ್ಯರಿಗೆ ತಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು. ಪ್ರಮಾಣ ವಚನ ಸ್ವಿಕರಿಸಿದ ಮಂತ್ರಿ ಮಂಡಲದ ಸರ್ವ ಸದಸ್ಯರಿಗೆ ಶುಭವನ್ನು ಹಾರೈಸಿದರು.