ಮಚ್ಚಿನ: ವಿಟ್ಲ ನಿಡ್ಯ ಚೈತ್ರ ಪ್ರತಾಪ್ ದಂಪತಿಗಳ ಮಗು 6 ವರ್ಷದ ಆಯುಷ್ ಲಿವರ್ ಸಮಸ್ಯೆಯಿಂದ ಬಳಲುತ್ತಿತ್ತು, ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಚೆನ್ನೈ ಆಸ್ಪತ್ರೆಗೆ ಸುಮಾರು 1640 ಕಿ.ಮೀರನ್ನು 14 ಗಂಟೆಯಲ್ಲಿ ಸಾಗಿ ಮಗುವಿನ ಪ್ರಾಣ ಉಳಿಸಿದ ಘಟನೆ ಜೂ.16ರಂದು ನಡೆದಿದೆ.
ಮಚ್ಚಿನದ ವೀರ ಕೇಸರಿ ಫ್ರೆಂಡ್ಸ್ ಆಂಬುಲೆನ್ಸ್ ಚಾಲಕ ದೀಕ್ಷಿತ್ ರವರು 6 ವರ್ಷದ ಮಗುವಿನ ಪ್ರಾಣ ಉಳಿಸಲು ಕೆ.ಎಂ.ಸಿ ಆಸ್ಪತ್ರೆಯಿಂದ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ಸಾಗಿಸಿ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ತಮಿಳುನಾಡಿನ ಪಾಂಡಿಚೆರಿ ಆಸ್ಪತ್ರೆಯಲ್ಲಿ ತಾಂತ್ರಿಕ ದೋಷದಿಂದ ಚಿಕಿತ್ಸೆ ದೊರೆಯದ ಕಾರಣ ಅಲ್ಲಿಂದ ಚೆನ್ನೈ ಆಸ್ಪತ್ರೆಗೆ ಸೇರಿಸುವಲ್ಲಿ ದೀಕ್ಷಿತ್ ರವರು ಶ್ರಮಪಟ್ಟು ಯಶಸ್ಸಿಯಾದರು.
ಈಗ ಮಗು ಚಿಕಿತ್ಸೆ ಪಡೆಯುತ್ತಿದೆ. 14 ಗಂಟೆಗಳ ಕಾಲ ನಿರಂತರ ಸಂಚರಿಸಿ ಮಗುವಿನ ಪ್ರಾಣ ಉಳಿಸಿದ ಇವರು ಇದೀಗ ಜನ ಮೆಚ್ಚುಗೆ ಪಾತ್ರರಾಗಿದ್ದಾರೆ.ಅದಲ್ಲದೆ ಸ್ಥಳೀಯವಾಗಿ ಕೂಡ ಹಲವಾರು ಜನರ ಪ್ರಾಣ ಉಳಿಸಿದ ಕೀರ್ತಿ ಇವರದ್ದಾಗಿದೆ. ಇವರು ಚೆನ್ನೈಯಿಂದ ಮಚ್ಚಿನಕ್ಕೆ ಹಿಂತಿರುಗುವ ವೇಳೆ ಬಳ್ಳಮಂಜ ವೀರ ಕೇಸರಿ ಫ್ರೆಂಡ್ಸ್ ನ ಯುವಕರು ಹಾಗೂ ಊರವರು ಹಾರ ಹಾಕಿ ಅಭಿನಂದಿಸಿದರು.