ಉಜಿರೆ: ಶ್ರೀ.ಧ.ಮಂ.ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

0

ಉಜಿರೆ: ಶ್ರೀ.ಧ.ಮಂ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂ.5ರಂದು ವಿಶ್ವಪರಿಸರ ದಿನಾಚರಣೆಯನ್ನು ಹಣ್ಣಿನ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್‌ ಕುಮಾರ್ ಮಾತನಾಡುತ್ತಾ ಮಾನವನ ಚಟುವಟಿಕೆಗಳೆಲ್ಲವೂ ಸಾಮಾನ್ಯವಾಗಿ ಪ್ರಕೃತಿಯ ಸಂಪನ್ಮೂಲದ ಬಳಕೆಯ ಮೇಲೆ ಅವಲಂಬಿತವಾಗಿದ್ದು, ಪರಿಸರವನ್ನು ಕ್ರಮೇಣ ವಿನಾಶದಂಚಿಗೆ ತಳ್ಳುತ್ತಿದೆ.

ಪ್ರಕೃತಿಯ ವಿನಾಶದಿಂದ ಆಹಾರ ಜಾಲದಲ್ಲುಂಟಾಗುವ ಅಸಮತೋಲನವು ಮಾನವ-ವನ್ಯಜೀವಿಗಳ ಸಂಘರ್ಶಕ್ಕೂ ಕಾರಣವಾಗುತ್ತಿದ್ದು ಗಂಭೀರ ಸಮಸ್ಯೆಗೆ ಎಡೆಮಾಡಿಕೊಡುತ್ತಿದೆ. ಆದರೆ ಶುದ್ದ ಗಾಳಿ-ನೀರು ಪ್ರತಿಯೊಂದು ಜೀವಿಯ ಹಕ್ಕು ಹಾಗಾಗಿ ನಮ್ಮೆಲ್ಲ ಚಟುವಟಿಕೆಗಳು ಭವಿಷ್ಯದಲ್ಲಿ ಪರಿಸರದ ಪುನೇತನಕ್ಕೆ ಪೂರಕವಾಗಿರಬೇಕು ಎಂದು ನುಡಿದರು.

ಘಟಕದ ಯೋಜನಾಧಿಕಾರಿ ಮಹೇಶ್ ಪಾಟೀಲ್ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here