ಜೂನ್ 12: ಬಳಂಜದಲ್ಲಿ ಸನಾತನ ಸಂತರಿಂದ ಆಧ್ಯಾತ್ಮಿಕ ಸಾಧನೆಯ ಕುರಿತು ವಿಶೇಷವಾದ ಮಾರ್ಗದರ್ಶನ ಕಾರ್ಯಕ್ರಮ

0

ಬಳಂಜ: ಶ್ರೀ ನಾಗಬ್ರಹ್ಮ ದೇವಸ್ಥಾನ ಬದಿನಡೆ ಬಳಂಜ, ಪಂಚಶ್ರೀ ಮಹಿಳಾ ಭಜನಾ ಮಂಡಳಿ ಬಳಂಜ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಳಂಜ ನಾಲ್ಕೂರು ಇವರ ಸಹಯೋಗದಲ್ಲಿ ಜೂನ್ 12ರಂದು ಸನಾತನ ಸಂಸ್ಥೆಯ ಹಿರಿಯ ಸಂತರಿಂದ ಆಧ್ಯಾತ್ಮಿಕ ಸಾಧನೆಯ ಕುರಿತು ವಿಶೇಷ ಮಾರ್ಗದರ್ಶನ ಕಾರ್ಯಕ್ರಮ ಬಳಂಜದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.

ಪ್ರಸ್ತುತ ಕಾಲಘಟ್ಟದಲ್ಲಿ ಸನಾತನ ಹಿಂದೂ ಧರ್ಮದ ಮೇಲೆ ವಿವಿಧ ರೀತಿಯಲ್ಲಿ ಅಕ್ರಮಣಗಳಾಗುತ್ತಿದೆ. ದೇವತೆಗಳ ವಿಡಂಬನೆ ನಡೆಯುತ್ತಿದೆ, ಅದರ್ಮಾಚರಣೆ ತಂಡವಾಡುತ್ತಿದೆ. ಕಳೆದ ನಾಲ್ಕು ಪೀಳಿಗೆಯಿಂದ ಹಿಂದೂ ಸಮಾಜಕ್ಕೆ ಹಿಂದೂ ಧರ್ಮದ ಶಿಕ್ಷಣ ಸಿಗದೇ ಇರುವ ಕಾರಣ ಈ ಎಲ್ಲ ಘಟನೆಗಳು ನಡೆಯುತ್ತಿದೆ. ಅದಕ್ಕಾಗಿ ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜಕ್ಕೆ ಹಿಂದೂ ಧರ್ಮದ ಬಗ್ಗೆ ವಿಶೇಷವಾದ ಮಾರ್ಗದರ್ಶನವನ್ನು ಸನಾತನ ಸಂಸ್ಥೆಯವರು ಹಲವು ವರ್ಷಗಳಿಂದ ಮಾಡುತ್ತಿದ್ದಾರೆ.

ಅವರ ಮಾರ್ಗದರ್ಶನದಿಂದ ಲಕ್ಷಾಂತರ ಜನರು ಧರ್ಮ ಮಾರ್ಗದಲ್ಲಿ ಜೀವನವನ್ನು ಮಾಡುತ್ತಿದ್ದಾರೆ. ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿದ್ದಾರೆ. ಆಧ್ಯಾತ್ಮದಲ್ಲಿ ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸಂತರ ಮಾರ್ಗದರ್ಶನವನ್ನು ಪ್ರತಿಯೊಬ್ಬ ಹಿಂದುವಿಗೆ ತಲುಪಲು ಹಿಂದೂ ಸಮಾಜಕ್ಕೆ ಸಂತರ ಮಾರ್ಗದರ್ಶನವನ್ನು ಆಯೋಜನೆ ಮಾಡಲಾಗಿದೆ. ಎಲ್ಲ ಹಿಂದೂ ಬಾಂಧವರು ಈ ಮಾರ್ಗದರ್ಶನದ ಲಾಭವನ್ನು ಪಡೆದುಕೊಳ್ಳಬೇಕಾಗಿ ಸನಾತನ ಸಂಸ್ಥೆಯ ಪ್ರಕಟಣೆಯಲ್ಲಿವಿನಂತಿಸಿದ್ದಾರೆ.

ಈ ಮಾರ್ಗದರ್ಶನದಲ್ಲಿ
* ನಮ್ಮ ಜೀವನದಲ್ಲಿ ಸುಖ-ದುಃಖ ಏಕೆ ಬರುತ್ತದೆ ?
* ಆನಂದಮಯ ಜೀವನಕ್ಕಾಗಿ ಏನು ಮಾಡಬೇಕು ?

ಇಂತಹ ಹಲವಾರು ಪ್ರಶ್ನೆಗಳಿಗೆ ಸಂತರು ಉತ್ತರಿಸಲಿದ್ದಾರೆ.ಈಗಾಗಲೇ ಬದಿನಡೆ ದೇವಸ್ಥಾನದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ರವರು ಸನಾತನ ಸಂಸ್ಥೆಯ ಜೊತೆಗೆ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದು ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಧರ್ಮ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ. ಪ್ರಮುಖರಾದ ಸದಾನಂದ ಸಾಲಿಯಾನ್ ಬಳಂಜ ಸನಾತನ ಸಂಸ್ಥೆಯ ಧರ್ಮ ಸಂದೇಶವನ್ನು ಪಸರಿಸುವ ಕಾರ್ಯ ಮಾಡುತ್ತಿದ್ದು ಸನಾತನ ಸಂಸ್ಥೆಯ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಈಗಾಗಲೇ ಬಳಂಜದಲ್ಲಿ ನಡೆಯುವ ಸಂತರ ಆಧ್ಯಾತ್ಮಿಕ ಸಂದೇಶ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸನಾತನ ಸಂಸ್ಥೆಯ ಪ್ರಚಾರಕ ಪ್ರಮುಖ್ ದಾಮೋದರ್ ಪಟ್ರಮೆ ಹಾಗೂ ತಂಡ ಬಳಂಜ ನಾಲ್ಕೂರಿನ ಹಿಂದೂ ಭಾಂದವರನ್ನು ಭೇಟಿ ಮಾಡಿದ್ದು ಇವರ ಜೊತೆಗೆ ಹಿಂದೂ ಮುಖಂಡರಾದ ಕರುಣಾಕರ್ ಹೆಗ್ಡೆ, ಸಂತೋಷ್ ಕೋಟ್ಯಾನ್, ಸಂತೋಷ್ ಕುಮಾರ್ ಕಾಪಿನಡ್ಕ,ಪಂಚಶ್ರೀ ಮಹಿಳಾ ಭಜನಾ ಮಂಡಳಿಯ ಪುಷ್ಪಾ ಗಿರೀಶ್, ವಿಶ್ವನಾಥ ಹೊಳ್ಳ ಸೇರಿದಂತೆ ಬಳಂಜ ನಾಲ್ಕೂರಿನ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಕೈ ಜೋಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here