ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಕಕ್ಯಪದವು : ಜೂನ್ 05ರಂದು ಎಲ್ ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರ ಮಹತ್ವ ಮತ್ತು ಅದನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಶಾಲಾ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ವಿವಿಧ ಗಿಡಗಳನ್ನು ತಂದು, ಈ ವೇಳೆಯಲ್ಲಿ ವಿದ್ಯಾರ್ಥಿಗಳು ತಂದ ಗಿಡಗಳ ಮಹತ್ವವನ್ನು ಹೇಳಿದರು. ವಿದ್ಯಾ ಸಂಸ್ಥೆಯ ಆವರಣದಲ್ಲಿ ಹೂವಿನ ಗಿಡ, ಔಷಧಿ ಗಿಡ, ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

ಈ ಮೂಲಕ ಪರಿಸರ ದಿನದ ಮಹತ್ವವನ್ನು ಆಧುನಿಕ ದಿನಗಳಲ್ಲಿ ಪರಿಸರದ ಅಗತ್ಯತೆಯನ್ನು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.’ ಮನೆಗೊಂದು ಮರ ಊರಿಗೊಂದು ವನ ‘ ಎಂಬಂತೆ ಶಾಲಾ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಗಿಡ ನೆಟ್ಟು, ನೆಟ್ಟ ಗಿಡವನ್ನು ಪೋಷಿಸಿ, ಪರಿಸರ ದಿನವೂ ಒಂದು ದಿನಕ್ಕೆ ಸೀಮಿತವಾಗಿರದೆ ಸದಾ ಪರಿಸರವನ್ನು ಉಳಿಸುವಂತೆ ಜಾಗೃತಿ ಮೂಡಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರು ಜೋಸ್ಟನ್ ಲೋಬೊ, ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ವಿಜಯಾ.ಕೆ, ಸಂಸ್ಥೆಯ ಸಂಯೋಜಕರು ಯಶವಂತ್ ಜಿ.ನಾಯಕ್ ಹಾಗೂ ಬೋಧಕ, ಬೋಧಕೇತರ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here