ಬೆಳ್ತಂಗಡಿ: ಮಾನವನ ಉನ್ನತ ಜೀವನಕ್ಕೆ ಪರಿಸರ ಪೂರಕವಾಗಿರುವಂತೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಜ್ವಲಾ ಡಿ ಆರ್ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ಪರಿಸರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇಂದಿನ ಜಾಗತಿಕ ವಿದ್ಯಮಾನಗಳು, ಅಭಿವೃದ್ಧಿ ಪೂರಕ ಯೋಜನೆಗಳು ಪರಿಸರವನ್ನು ಕಡೆಗಣಿಸಿವೆ. ಇದು ಭವಿಷ್ಯದ ಜನಾಂಗಕ್ಕೆ ಮಾರಕವಾಗಲಿದೆ. ಜ್ಞಾನಿ ಎನಿಸಿಕೊಂಡ ಮಾನವನಿಂದಲೇ ಪರಿಸರವು ಹಾನಿಗೆ ಒಳಗಾಗುತ್ತಿರುವುದು ವಿಪರ್ಯಾಸವಾಗಿದೆ.ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಪ್ರಕೃತಿಯ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಹಸಿರು ಭವಿಷ್ಯಕ್ಕಾಗಿ ನಮ್ಮ ಪಯಣ ನಿರಂತರವಾಗಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ, ಪರಿಸರ ಸಂಘದ ಸಂಯೋಜಕಿ ದೀಕ್ಷಾ, ಸ್ವಾತಿ ಉಪಸ್ಥಿತರಿದ್ದರು.ವಿಭಾ ಸ್ವಾಗತಿಸಿದರು. ಅನ್ವಿತ್ ಧನ್ಯವಾದವಿತ್ತರು. ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು.