ಲೋಕಸಭಾ ಚುನಾವಣೆ: ದ.ಕ. ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ ಮುನ್ನಡೆ- ಕಾಂಗ್ರೆಸ್‌ನ ಪದ್ಮರಾಜ್‌ ಪೂಜಾರಿಗೆ ಹಿನ್ನಡೆ- ಕ್ಷಣ ಕ್ಷಣದ ಮಾಹಿತಿಗೆ ವೀಕ್ಷಿಸಿ ಸುದ್ದಿ ನ್ಯೂಸ್

0

ಬೆಳ್ತಂಗಡಿ: ಭಾರಿ ಕುತೂಹಲ ಕೆರಳಿಸಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಆರಂಭದಿಂದಲೇ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮುನ್ನಡೆಯಲ್ಲಿದ್ದಾರೆ.

ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ.ಯಲ್ಲಿ ಭಾರಿ ಬಂದೋಬಸ್ತ್ ಮಧ್ಯೆ ಮತ ಎಣಿಕೆ ನಡೆಯುತ್ತಿದೆ. ಇದುವರೆಗಿನ ಹಲವು ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದುವರೆಗಿನ ಮಾಹಿತಿ ಪ್ರಕಾರ, ಸುಮಾರು 22 ಸಾವಿರ ಮತಗಳ ಅಂತರವಿದೆ. ಭಾರಿ ಕುತೂಹಲ ಕೆರಳಿಸಿರುವ ನೋಟಾಕ್ಕೂ ಅಧಿಕ ಮತ ಚಲಾವಣೆಯಾಗಿದ್ದು, ಮೂರನೇ ಸ್ಥಾನದಲ್ಲಿದೆ.

ಯಾರಿಗೆ ಎಷ್ಟು ಮತ?:

  • ಕ್ಯಾ.ಬ್ರಿಜೇಶ್ ಚೌಟ (ಬಿಜೆಪಿ) – 1,33,896
  • ಪದ್ಮರಾಜ್ ಆರ್. ಪೂಜಾರಿ (ಕಾಂಗ್ರೆಸ್) – 1,11,312
  • ಕಾಂತಪ್ಪ ಅಲಂಗಾರ್ (ಬಿಎಸ್‌ಪಿ) – 749
  • ದುರ್ಗಾ ಪ್ರಸಾದ್ (ಕರುನಾಡ ಸೇವಕರ ಪಕ್ಷ) – 470
  • ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ)- 364
  • ಮ್ಯಾಕ್ಸಿಂ ಪಿಂಟೊ (ಪಕ್ಷೇತರ)- 306
  • ಪ್ರಜಾಕೀಯ ಮನೋಹರ್ (ಯುಪಿಪಿ)- 186
  • ದೀಪಕ್ ರಾಜೇಶ್ ಕುವೆಲ್ಲೊ (ಪಕ್ಷೇತರ)- 167
  • ರಂಜಿನಿ ಎಂ. (ಕೆಆರ್.ಎಸ್.) – 125
  • ನೋಟಾ – 4549

ಸುದ್ದಿಯಲ್ಲಿ ಕ್ಷಣಕ್ಷಣದ ಮಾಹಿತಿ:
ರಾಷ್ಟ್ರದ 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು, ಗದ್ದುಗೆ ಏರುವವರು ಎಂದು ಕಾದು ನೋಡಬೇಕಿದೆ. ಲೋಕಸಭಾ ಚುನಾವಣೆಯ ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿಗಾಗಿ ಸುದ್ದಿ ಬಿಡುಗಡೆ ವೆಬ್ ಸೈಟ್ ಮತ್ತು ಸುದ್ದಿ ನ್ಯೂಸ್ ಚಾನೆಲ್ ವೀಕ್ಷಿಸಬಹುದು.https://youtu.be/-9by3Kip2b4, https://youtu.be/-9by3Kip2b4

LEAVE A REPLY

Please enter your comment!
Please enter your name here