ಸಿಇಟಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರ‍್ಯಾಂಕ್

0

ಕಲ್ಲಬೆಟ್ಟು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ.

ನಿಖಿಲ್ ಬಿ ಗೌಡ ವೆಟರ್ನರಿ ಮತ್ತು ನರ್ಸಿಂಗ್‌ನಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್, ಬಿಫಾರ್ಮಾ ಮತ್ತು ಡಿಫಾರ್ಮಾಗಳಲ್ಲಿ 10ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 31ನೇ ರ‍್ಯಾಂಕ್, ಅಗ್ರಿಕಲ್ಚರಲ್‌ನಲ್ಲಿ 108ನೇ ರ‍್ಯಾಂಕ್ ಪಡೆದಿರುತ್ತಾನೆ. ಶ್ರೀಶೈಲ ಅಗ್ರಿಕಲ್ಚರಲ್(ಪಿ) ಮತ್ತು ವೆಟರ್ನರಿ(ಪಿ) 2ನೇ ರ‍್ಯಾಂಕ್, ನಿಶಾಂತ್ ಪಿ ಹೆಗಡೆ ವೆಟರ್ನರಿ 54ನೇ ರ‍್ಯಾಂಕ್, ನರ್ಸಿಂಗ್ 54, ಅಗ್ರಿಕಲ್ಚರಲ್ 59, ಬಿಎನ್‌ವೈಎಸ್ 61, ಬಿಫಾರ್ಮಾ ಮತ್ತು ಡಿಫಾರ್ಮಾ 89ನೇ ರ‍್ಯಾಂಕ್ ಪಡೆದಿರುತ್ತಾರೆ.

ಅದೇ ರೀತಿ ಭಾರ್ಗವಿ ಎಂ ಜೆ, ಸೃಜನ್ ಎಂ ಆರ್, ಶಿಶಿರ ಬಿ ಇ, ರೋಹನ್ ಎಸ್, ಶಶಾಂಕ್ ಎಂ, ಸುಹಾಸ್ ಎಂ ಎಸ್, ಸಮರ್ಥ ಸಮ್ಯಮ್, ಸಂಜಯ್ ಬಿರಾದಾರ್ ಅತ್ಯುತ್ತಮ ಅಂಕಗಳೊಂದಿಗೆ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ವಿವಿಧ ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ನೂರರ ಒಳಗೆ 11 ರ‍್ಯಾಂಕ್, ಐದುನೂರರ ಒಳಗೆ 44 ರ‍್ಯಾಂಕ್, ಸಾವಿರದ ಒಳಗೆ 91 ರ‍್ಯಾಂಕ್ ಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.

ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ ಶೆಟ್ಟಿ, ಉಪಪ್ರಾಂಶುಪಾಲ, ಸಿಇಟಿ ಸಂಯೋಜಕ ಮತ್ತು ಭೌತಶಾಸ್ತç ಉಪನ್ಯಾಸಕ ಮನೋಜ್ ಕುಮಾರ್ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

p>

LEAVE A REPLY

Please enter your comment!
Please enter your name here