ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತಾ ತರಗತಿಗಳ ಆರಂಭ

0

ನಾವೂರು: ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ 2024-25ನೇ ಸಾಲಿನ ಭಗವದ್ಗೀತಾ ತರಗತಿಗಳ ಆರಂಭವನ್ನು ದೇವಸ್ಥಾನದ ಪ್ರಧಾನ ಅರ್ಚಕ ನೇ।ಮೂ।ದಿನೇಶ್ ಭಟ್ ಇವರು ಮೇ 31ರಂದು ಉದ್ಘಾಟಿಸಿ ನಡೆಸಿಕೊಟ್ಟರು.

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಮೊರ್ತಾಜೆ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಎಂ., ಟ್ರಸ್ಟಿಗಳಾದ ಹರೀಶ್ ಕಾರಿಂಜ,ಗಣೇಶ್ ನಾವೂರು, ತನಿಯಪ್ಪ ನಲ್ಕೆ, ತಿಮ್ಮಪ್ಪ ಗೋಲ್ತರ, ಪೂರ್ಣಿಮ ಧರ್ಣಪ್ಪ ಮೂಲ್ಯ, ನಾವೂರಿನ ವೈದ್ಯ ಡಾ.ಪ್ರದೀಪ್ ಉಪಸ್ಥಿತರಿದ್ದರು.

ಕಳೆದ 8 ವರ್ಷಗಳಿಂದ ಪ್ರತಿ ಬುಧವಾರ ನಾವೂರು ದೇವಸ್ಥಾನದಲ್ಲಿ ಭಗವದ್ಗೀತಾ ಪಾಠ-ಪಠಣ ತರಗತಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಈಗಾಗಲೇ 12 ಹಾಗೂ 15 ಧ್ಯಾಯವನ್ನು ಕಂಠಪಾಠ ಮಾಡಿರುತ್ತಾರೆ.

ಈ ವರ್ಷ 16 ಅಧ್ಯಾಯದ ಪಾಠ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here