ಬೆಳ್ತಂಗಡಿ: ಕಲ್ಮಂಜ ಶಾಲಾ ಆವರಣ ಮತ್ತು ಬಾವಿಯೊಗಿನ ಕಳೆ ಕೀಳುವ ಮೂಲಕ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಮಾದರಿ ಸೇವೆ ಮಾಡಿದೆ.
ಮೇ 31ರಂದು ಶಾಲಾರಂಭದ ನಿಮಿತ್ತ ಈ ತಂಡ ಸದವ ಇಚ್ಚೆಯಿಂದ ಈ ವಿಶೇಷ ಸೇವೆ ಮಾಡುವ ಮೂಲಕ ಮಾದರಿ ಎನಿಸಿದೆ.
ತಂಡದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸಂತೋಷ್ ಬೆಳಾಲು, ಸುಧೀರ್ ಕಲ್ಮಂಜ, ರವೀಂದ್ರ ಉಜಿರೆ ಮತ್ತು ರಾಘವೇಂದ್ರ ಉಜಿರೆ ಹಾಗೂ ಸಚಿನ್ ಭಿಡೆ ಮುಂಡಾಜೆ ಇವರು ಭಾಗಿಯಾಗಿದ್ದರು.
ಶಾಲಾ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಇವರ ಈ ಸೇವಾ ಕಾರ್ಯವನ್ನು ಸ್ಲಾಘಿಸಿದರು.
ಪ್ರವೇಶ ದ್ವಾರವನ್ನೂ ಸ್ವಚ್ಚಗೊಳಿಸಿದ ತಂಡ ಬಾಳೆ ಗಿಡ ಮತ್ತು ಮಾವಿನೆಲೆಯ ತೋರಣವನ್ನೂ ಕಟ್ಟುವ ಮೂಲಕ ನವ ವರ್ಷದ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲಾ ಆವರಣವನ್ನು ಅಣಿಗೊಳಿಸಿದರು.
p>