ಮುಗ್ಗಗುತ್ತು ಮನೆಯಲ್ಲಿ ವಸಂತ ಬಂಗೇರ, ಶೇಖರ ಬಂಗೇರರವರಿಗೆ 16 ಅಗೇಲು ಕಾರ್ಯಕ್ರಮ

0

ಬೆಳ್ತಂಗಡಿ: ಕರಾಯ ಗ್ರಾಮದ ಮುಗ್ಗ ಗುತ್ತು ಮನೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ ಮುಗ್ಗ ಮನೆ ತನದ ಆಡಳಿತ ಮೋಕ್ತೆಸರ ಕೇದೆ ವಸಂತ ಬಂಗೇರ ಮತ್ತು ಮುಗ್ಗಗುತ್ತಿನ ಕೋಶಾಧಿಕಾರಿ ಹೇರಾಜೆ ಶೇಖರ ಬಂಗೇರ ರವರ ಸದ್ಗತಿಗಾಗಿ ಕುಟುಂಬದ ಪದ್ಧತಿಯಂತೆ ಹಿರಿಯರೊಂದಿಗೆ ಸೇರಿಸುವ ಹದಿನಾರು ಆಗೇಲು ಕಾರ್ಯಕ್ರಮ ಮೇ 24ರಂದು ಮುಗ್ಗ ಮನೆಯ ದುರ್ಗಾಂಬಿಕ ದೇವಿಯ ಸನ್ನಿಧಿಯಲ್ಲಿ ಮಹಾಪೂಜೆಯ ಬಳಿಕ ನಡೆಯಿತು.

ಸುಮಾರು 500ಕ್ಕೂ ಮಿಕ್ಕಿ ಕುಟುಂಬದ ಬಂಧುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ಮಹಾಪೂಜೆಯ ಸಂದರ್ಭದಲ್ಲಿ ಶೇಖರ ಬಂಗೇರರವರ ಪರವಾಗಿ ಬೆಳ್ಳಿಯ ಹರಿವಾಣ, ದೀಪಗಳು ನಿತ್ಯ ಪೂಜೆಗೆ ಬೇಕಾದ ಪರಿಕರಗಳನ್ನು, ಹಾಗೂ 50 ಸಾವಿರ ರೂಪಾಯಿಗಳ ಭದ್ರತಾ ಠೇವಣಿಯನ್ನು ದುರ್ಗಾ ಮಾತೆಗೆ ಶೇಖರ ಬಂಗೇರರ ಹಿರಿಯ ಪುತ್ರಿ ಸುಲಕ್ಷಣ ದಿನೇಶ್ ಅಮೀನ್ ಕುಂದಾಪುರ ಮತ್ತು ಪವಿತ್ರ ವಿಜಯ ಸಾಲಿಯಾನ್ ಅರ್ಪಿಸಿದರು.

ಈ ಸಂದರ್ಭದಲ್ಲಿ ವಸಂತ ಬಂಗೇರರ ಧರ್ಮಪತ್ನಿ ಸುಜಿತಾ ಬಂಗೇರ ಮಕ್ಕಳು ಮೊಮ್ಮಕ್ಕಳು, ಹೇರಾಜೆ ಶೇಖರ ಬಂಗೇರರವರ ಧರ್ಮಪತ್ನಿ ಲೋಲಾಕ್ಷಿ ಬಂಗೇರ, ಮಕ್ಕಳು, ಮೊಮ್ಮಕ್ಕಳು ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.

ಹಿರಿಯರಾದ ಗುರುದೇವ ವಿವಿದೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ತೇಜೋಮಯ, ಜನಾರ್ದನ ಬಂಗೇರ ಖಂಡಿಗ, ಡಾ.ಯಶೋಧರ,ಡಾ.ಕೇಶವ, ನಿವೃತ್ತ ಎಸ್.ಪಿ.ಪೀತಾಂಬರ ಹೆರಾಜೆ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಗನ್ನಾಥ ಬಂಗೇರ ನಿರ್ಮಾಲ್, ಡಾ.ಜಗನ್ನಾಥ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಯೋಗೀಶ್ ನಡಕರ, ಗಂಗಾಧರ ಮಿತ್ತಮಾರ್, ಭಗೀರಥ ಗುಂಪೋಳಿ, ಡಾ ರಾಜಾರಾಮ್, ನಿವೃತ್ತ ಎಸ್ ಪಿ ಮಿತ್ರ ಹೆರಾಜೆ, ನಿವೃತ್ತ ಡಿ.ಎಫ್.ಓ ದಿವಾಕರ, ಚಂದ್ರಶೇಖರ ಪೂಜಾರಿ, ಸೂರ್ಯನಾರಾಯಣ, ರಮೇಶ್ ಬಂಗೇರ ಮಾಣಿಂಜ, ಜಯ ವಿಕ್ರಮ ಕಲ್ಲಾಪು, ರಮೇಶ್ ಬಂಗೇರ ಕೇದೆ. ಮೋಟಾರ್ ವಾಹನ ಹಿರಿಯ ನಿರೀಕ್ಷಕ ಚರಣ್ ಕೆ, ತುಕಾರಾಂ ಬಂಗೇರ, ನವೀನ್ ಬಂಗೇರ, ಪ್ರಶಾಂತ ಕಂಡೆಂತಿಯಾರ್, ಕೀರ್ತಿ ಮೂರ್ಜೆ, ದಿನೇಶ್ ಪಿದಾಮಲೆ, ಪ್ರವೀಣ್ ಡಿ ಬಂಗೇರ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.

p>

LEAVE A REPLY

Please enter your comment!
Please enter your name here