


ಬೆಳ್ತಂಗಡಿ: ಮಂಗಳೂರು ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆ ಇವರ ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಲ್ಲಿ ಧರ್ಮಜ್ಯೋತಿ ಸ್ಕಾಲರ್ಶಿಪ್ ಯೇಜನೆಯ ಮುಲಕ ಆಯ್ದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಲಭಿಸುತ್ತಿದ್ದು, ಫಲಾನುಭವಿಗಳ ಹಾಗೂ ಪೋಷಕರ ಸಭೆಯು ಮೇ 22ರಂದು ಸಾಂತೋಮ್ ಟವರ್ ನಲ್ಲಿ ನಡೆಯಿತು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ.ಬಿನೋಯಿ ಎ.ಜೆ.ರವರು ಸ್ಕಾಲರ್ಶಿಪ್ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅಂಕ ಗಳಿಸಬೇಕು ಎಂದು ಪ್ರಾಸ್ತಾವಿಕ ಮಾತನಾಡಿದರು.

ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆಯ ಸಿ.ಫಿಲೋಮಿನಾರವರು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು.


ರೆನಿಟಾರವರು ವಿದ್ಯಾರ್ಥಿಗಳ ಪೋಷಕರಿಗೆ ಹಿತವಚನ ನುಡಿದರು.
ಮಕ್ಕಳ ದಾನಿಗಳಿಗೆ ಕಾಗದ ಹಾಗೂ ಚಿತ್ರಕಲೆಯನ್ನು ಮಕ್ಕಳಿಂದ ಬರೆಸಲಾಯಿತು.
ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಒಟ್ಟು 142 ಮಕ್ಕಳು ಉಪಸ್ಥಿತರಿದ್ದರು.








