ನೆಲ್ಯಾಡಿ: ತೂಫಾನ್ ಹಾಗೂ ಕಾರೊಂದರ ನಡುವೆ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು ಜಖಂಗೊಂಡು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬೂಡುಜಾಲು ಕಾನಾಜೆ ಎಂಬಲ್ಲಿ ಮೇ ೧೬ರಂದು ಬೆಳಿಗ್ಗೆ ನಡೆದಿದೆ.
ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅಝೀಝ್ ಎಂಬವರು ತೂಫಾನ್ (ಕೆಎ 21, ಸಿ 4158)ವಾಹನದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಧರ್ಮಸ್ಥಳದಿಂದ ಕೊಕ್ಕಡ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು ನಿಡ್ಲೆ ಗ್ರಾಮದ ಬೂಡುಜಾಲು ಕಾನಾಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಕಾವ್ಯ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು(ಕೆಎ 21, ಎಂಎಫ್ 3978) ಡಿಕ್ಕಿಯಾಗಿದೆ.
ಪರಿಣಾಮ ತೂಫಾನ್ ಪ್ರಯಾಣಿಕರಾದ ಶಾಂತ, ಶಾಂತಮ್ಮ, ಮಂಜುಳಾ, ಪವನ್, ವಿನಾಯಕ, ಭವಾನಿ ಹಾಗೂ ಕಾರು ಚಾಲಕಿ ಕಾವ್ಯ, ಕಾರಿನಲ್ಲಿದ್ದ ಪ್ರಯಾಣಿಕರಾದ ಪ್ರದೀಪ್ ಕುಮಾರ್, ದಕ್ಷತ್, ತೃಷಾ ಎಂಬವರು ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ತೂಫಾನ್ ಚಾಲಕ ಅಝೀಝ್ ಅವರು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾರು ಚಾಲಕಿ ಕಾವ್ಯ ಅವರು ದುಡುಕುನತನದಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ತೂಫಾನ್ಗೆ ಡಿಕ್ಕಿಯಾಗಿರುವುದಾಗಿ ತೂಫಾನ್ ಚಾಲಕ ಅಝೀಝ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.