ಬಳಂಜ: ತಾಲೂಕು ಕಂಡ ಅಪರೂಪದ ಶ್ರೇಷ್ಠ ರಾಜಕಾರಣಿ ವಸಂತ ಬಂಗೇರರವರು ಅವರ ನೇರ ನಡೆ ನುಡಿ, ಬಡವರ ಪಾಲಿನ ಆಶಾಕಿರಣವಾಗಿದ್ದ ವಸಂತ ಬಂಗೇರರ ಅಗಲಿಕೆ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಹೇಳಿದರು.
ಅವರು ಮೇ 12ರಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆಯಿಂದ ನಡೆದ ಕೆ.ವಸಂತ ಬಂಗೇರರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ಪಟ್ಟವರು ವಸಂತ ಬಂಗೇರರು.
1982 ರಲ್ಲಿ ಬಳಂಜ ಬಿಲ್ಲವ ಸಂಘದ ಶಂಕು ಸ್ಥಾಪನೆಯನ್ನು ನೇರವೇರಿಸಿ ಬಿಲ್ಲವ ಸಮಾಜದ ಪ್ರಗತಿಗೆ ಸಹಕಾರ ನೀಡಿದ್ದಾರೆ.ಅವರೊಬ್ಬ ಪಕ್ಷಾತೀತ ನಾಯಕ. ಎಲ್ಲರೊಂದಿಗೂ ಉತ್ತಮ ಸಂಭಂದ ಹೊಂದಿದ್ದರು ಎಂದರು.ಬಳಂಜ ಬ್ರಹ್ಮಶ್ರೀ ನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್.ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಹೆಚ್.ದೇಜಪ್ಪ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ನಿರ್ದೆಶಕರಾದ ದಿನೇಶ್ ಪೂಜಾರಿ ಅಂತರ, ರಂಜಿತ್ ಪೂಜಾರಿ, ಪ್ರವಿಣ್ ಪೂಜಾರಿ ಲಾಂತ್ಯಾರು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಸದಸ್ಯ ಸಂಪತ್ ಪಿ ಕೋಟ್ಯಾನ್, ಆದರ್ಶ್ ಪೂಜಾರಿ, ದೀಪಕ್ ಹೆಚ್.ಡಿ, ಹಿರಿಯರಾದ ಲಕ್ಷ್ಮಣ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.