ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ, ಕಳೆದ 50 ವರ್ಷದಲ್ಲಿ ಕ್ಷೇತ್ರದ ಬಡ ಜನತೆಯ ಧ್ವನಿಯಾಗಿ ಕೆಲಸ ಮಾಡಿ ಇಹಲೋಕ ತ್ಯಜಿಸಿದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು, ಸಂಘದ ವಾಣಿಜ್ಯ ಸಂಕೀರ್ಣದ ರೂವಾರಿ, ಸಂಘದ ಗೌರವಾದ್ಯಕ್ಷರಾಗಿದ್ದ ವಸಂತ ಬಂಗೇರರ ಹೆಸರಿನಲ್ಲಿ ಬೆಳ್ತಂಗಡಿ ಪೇಟೆಯಲ್ಲಿ ಒಂದು ವೃತ್ತ ನಿರ್ಮಿಸಿ ಅದರಲ್ಲಿ ಬಂಗೇರರ ಕಂಚಿನ ಪುತ್ಥಳಿ ನಿರ್ಮಿಸಲು ಮತ್ತು ಬೆಳ್ತಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ಸು ತಂಗುದಾಣಕ್ಕೆ ವಸಂತ ಬಂಗೇರರ ಹೆಸರು ಇಡುವಂತೆ ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಲು ಇಂದು ನಡೆದ ಸಂಘದ ಮಾಸಿಕ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ವಸಂತ ಬಂಗೇರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಧ್ಯಕ್ಷರಾದ ಜಯವಿಕ್ರಮ್ ಕಲ್ಲಾಪು, ಉಪಾಧ್ಯಕ್ಷರಾದ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೇಶ್ ಎಚ್ ಕೋಟ್ಯಾನ್, ಕೋಶಾಧಿಕಾರಿ ಪ್ರಶಾಂತ್ ಮಚ್ಚಿನ, ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ ಕೆ ಪ್ರಸಾದ್, ಮಾಜಿ ಅಧ್ಯಕ್ಷರುಗಳಾದ ಪಿತಾಂಬರ ಹೆರಾಜೆ, ಯೋಗೀಶ್ ಕುಮಾರ್ ನಡಕ್ಕರ, ಚಿದಾನಂದ ಪೂಜಾರಿ, ಜಯರಾಮ ಬಂಗೇರ, ಮಾಜಿ ಉಪಾಧ್ಯಕ್ಷ ಮನೋಹರ ಕುಮಾರ್, ನಿರ್ದೇಶಕರುಗಳಾದ ಸಂಜೀವ ಪೂಜಾರಿ, ಜಯ ಕುಮಾರ್, ಉಷಾ ಶರತ್, ವಿನೋದಿನಿ ರಾಮಪ್ಪ, ರಾಜಶ್ರೀ ರಮಣ್, ಪ್ರಮೋದ್ ಮಚ್ಚಿನ, ರಾಜೀವ ಸಾಲ್ಯಾನ್, ರವೀಂದ್ರ ಬಿ ಅಮೀನ್, ನಾರಾಯಣ ಪೂಜಾರಿ, ವಿಶ್ವನಾಥ ಸಾಲ್ಯಾನ್ , ಚಂದ್ರಶೇಖರ ಮತ್ತು ಕಮಲಾಕ್ಷ, ಸುಚೇತ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.