

ಬೆಳ್ತಂಗಡಿ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಗಣೇಶ್ ಭಟ್ ಮಾಲಿನಿ ದಂಪತಿಗಳ ಪುತ್ರ ಚಿನ್ಮಯ್ ಇವರನ್ನು ಉಪ್ಪಿನಂಗಡಿ ಮಂಡಲ ಹಾಗೂ ಉಜಿರೆ ವಲಯದ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಹವ್ಯಕ ಮಂಡಲ ಕಾರ್ಯದರ್ಶಿ ಮಹೇಶ್ ಕುದುಪುಲ, ಉಜಿರೆ ಹವ್ಯಕ ವಲಯ ಅಧ್ಯಕ್ಷ ಅತ್ತಾಜೆ ಶ್ಯಾಮ ಭಟ್, ಉಜಿರೆ ಹವ್ಯಕ ವಲಯದ ಕಾರ್ಯದರ್ಶಿ ಮಟ್ಲ ಪ್ರಕಾಶ್ ಭಟ್, ಉಜಿರೆ ವಲಯದ ಸಹಾಯ ಶಾಖೆ ಮುಖ್ಯಸ್ಥ ಅರ್ನಾಡಿ ಶ್ಯಾಮ ಭಟ್ ಉಪಸ್ಥಿತರಿಸ್ದರು.