


ಬೆಳ್ತಂಗಡಿ: ಲಾಯಿಲ ಗ್ರಾಮದ ಬಜಕಿರೆ ಸಾಲು ಯೋಗೀಶ್ ಭಿಡೆ ಅವರ ಮನೆಯ ಕೆರೆಗೆ ಬಿದ್ದ ನಾಗರ ಹಾವನ್ನು ಉರಗ ಪ್ರೇಮಿ ಲಾಯಿಲ ಅಶೋಕ್ ಅವರು ಇಂದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.


ಬಿಸಿಲಿನ ಬೇಗೆಗೆ ಬಾಯಾರಿ ನೀರಿಗೆ ಬಂದ ಹಾವು ಮೇಲೆ ಬರಲಾಗದೆ ಬಸವಳಿದಿತ್ತು.
ಮನೆಮಂದಿ ಕಂಡು ಅಶೋಕ್ ಅವರಿಗೆ ಮಾಹಿತಿ ನೀಡಿದಂತೆ ರಕ್ಷಿಸಿದ್ದಾರೆ.









