ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ, ನಾಡಿನ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ನಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಉರೂಸ್ ಸಂಭ್ರಮದಲ್ಲಿ ಪ್ರತಿದಿನ ರಾತ್ರಿ ನಡೆಯುವ ಆಧ್ಯಾತ್ಮಿಕ ಕಾರ್ಯಕ್ರಮಗಳು ವಿಶೇಷ ಕಳೆ ನೀಡಿದೆ.
ಸಯ್ಯಿದ್ ಕುಂಬೋಳ್ ತಂಙಳ್, ಸಯ್ಯಿದ್ ಕೂರತ್ ತಂಙಳ್ ಮತ್ತು ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಮೇ.3ರಂದು ಕಿಲ್ಲೂರು ಖತೀಬ್ ಶಂಶೀರ್ ಸಖಾಫಿ ಧಾರ್ಮಿಕ ಪ್ರವಚನ ನೀಡಿದರು.
ಮೇ.4ರಂದು ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ ಧಾರ್ಮಿಕ ಉಪನ್ಯಾಸ ನಡೆಸಿಕೊಟ್ಟರು.ಮೇ.5 ರಂದು ಅಂತಾರಾಷ್ಟ್ರೀಯ ಖ್ಯಾತಿಯ ಹಾಡುಗಾರರಾದ ಸಯ್ಯಿದ್ ತ್ವಾಹಾ ತಂಙಳ್ ಪೂಕೊಟೂರು ಮತ್ತು ಶಹಿನ್ ಬಾಬು ಅವರ ಸಂಗಡಿಗರ ಭಾಗವಹಿಸುವಿಕೆಯಲ್ಲಿ ಪ್ರವಾದಿ ನಾಮಸಂಕೀರ್ತನೆಯ ಬುರ್ದಾ ಮಜ್ಲಿಸ್ ಹಾಗೂ ಪ್ರವಾದಿ ಮದಹ್ ಗೀತೆಗಳ ಇಶಲ್ ನೈಟ್ ನಡೆಯಿತು.
ಮದನಿಯಂ ಅಬ್ದುಲ್ ಲೆತೀಫ್ ಸಖಾಫಿ ಕಾಂತಪುರ ಅವರನ್ನು ಸನ್ಮಾನಿಸುತ್ತಿರುವುದು.
ಮೇ.6ರಂದು, ಆನ್ಲೈನ್ ವೇದಿಕೆ ಮೂಲಕ ಧರ್ಮ ಸಂದೇಶದ ಹೊಸ ಇತಿಹಾಸ ಬರೆದಿರುವ ಅಬ್ದುಲ್ಲತೀಫ್ ಸಖಾಫಿ ಕಾಂದಪುರಂ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಿತು. ಮೇ.7 ರಂದು ಅಶ್ಪಾಕ್ ಫೈಝಿ ನಂದಾವರ ಅವರು ಧಾರ್ಮಿಕ ಪ್ರವಚನ ನೀಡಿದರು.
ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ವಹಿಸಿದ್ದರು.
ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು ಉಪಸ್ಥಿತರಿದ್ದು ಅತಿಥಿಗಳನ್ನು ಕಾಜೂರು ಪರವಾಗಿ ಅಭಿನಂದಿಸಿ ಗೌರವಿಸಿದರು.ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ, ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದಾರುಸ್ಸಲಾಂ, ಕಾಜೂರು ಮುದರ್ರಿಸ್ ಮುಹಮ್ಮದ್ ತೌಸೀಫ್ ಸಅದಿ ಹರೇಕಳ, ಬೆಳ್ತಂಗಡಿ ಭಾಗಿಯಾಗಿದ್ದರು.
ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಸುಬ್ಬಾಪುರಮಠ, ವಕ್ಫ್ ಜಿಲ್ಲಾಧಿಕಾರಿ ಅಬೂಬಬಕ್ಕರ್ ಸಾಲೆತ್ತೂರು ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಶರೀಅತ್ ಕಾಲೇಜು ಪದವಿ ಪ್ರದಾನ: ಮೇ.8 ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜಿನ ಎರಡನೇ ವರ್ಷದ ಸನದುದಾನ (ಪದವಿ ಪ್ರದಾನ) ಕಾರ್ಯಕ್ರಮ ನಡೆಯಲಿದೆ. ಖಾಝಿ ಮಾಣಿ ಉಸ್ತಾದ್, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ವಹಿಸಲಿದ್ದಾರೆ.
ದಿಕ್ರ್ ಮಜ್ಲಿಸ್ ಮತ್ತು ಉರೂಸ್ ಸಮಾರೋಪ: ಮೇ.9 ರಂದು ಬೃಹತ್ ದಿಕ್ರ್ ಮಜ್ಲಿಸ್ ನಡೆಯಲಿದೆ. ಮೇ.12ರಂದು ಸಂಜೆ ಮಗ್ರಿಬ್ ಬಳಿಕ ಸರ್ವ ಧರ್ಮೀಯ ಸಮನ್ವಯ ಕಾರ್ಯಕ್ರಮ, ರಾತ್ರಿ 10ಕ್ಕೆ ಉರೂಸ್ ಸಮಾರೋಪ ಸಮಾರಂಭದ ನಡೆಯಲಿದೆ. ಡಾ.ಹಕೀಂ ಅಝ್ಹರಿ ಕೇರಳ, ಮೌಲಾನಾ ಶಾಫಿ ಸಅದಿ ಬೆಂಗಳೂರು, ಡಾ. ಝೈನಿ ಕಾಮಿಲ್ ಸಖಾಫಿ, ಸಚಿವ ಝಮೀರ್ ಅಹಮದ್ ಖಾನ್, ವೈ ಅಬ್ದುಲ್ಲ ಕುಂಞಿ ಯೆನಪೋಯ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ. ಶಾಸಕರು,ಮಾಜಿ ಶಾಸಕರು, ವಿಧಾನ ಲರಿಷತ್ ಶಾಸಕರುಗಳು, ಧಾರ್ಮಿಕ ವಿದ್ವಾಂಸರು ಭಾಗಿಯಾಗಲಿದ್ದಾರೆ.