ಬಿ.ಎಸ್.ಎಫ್.ಯೋಧ ಬೆಳ್ತಂಗಡಿಯ ಗಣೇಶ್ ನಿವೃತ್ತಿ- ಮೇ.4ರಂದು ಊರಿಗೆ ಆಗಮನ

0

ಬೆಳ್ತಂಗಡಿ: ಭಾರತೀಯ ಗಡಿ ಭದ್ರತಾ ಪಡೆ(ಬಿ.ಎಸ್.ಎಫ್)ಯಲ್ಲಿ 21 ವರ್ಷ ಸೇವೆ ಸಲ್ಲಿಸಿರುವ ಬೆಳ್ತಂಗಡಿಯ ಗಣೇಶ್ ಬಿ.ಎಲ್. ಇವರು ಮೇ 2ರಂದು ನಿವೃತ್ತಿಯಾಗುತ್ತಿದ್ದು, ಮೇ.4ರಂದು ಹುಟ್ಟೂರಿಗೆ ಆಗಮಿಸಲಿದ್ದಾರೆ.

ಗಣೇಶ್ 2002ರ ಡಿ.5ರಂದು ಬಿ.ಎಸ್.ಎಫ್.ಗೆ ಸೈನಿಕನಾಗಿ ಸೇರ್ಪಡೆಗೊಂಡು, ಭಾರತ-ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್, ರಾಜಸ್ಥಾನ, ಅಸ್ಸಾಂ, ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿ, ನಂತರ ಉತ್ತರ ಪ್ರದೇಶ, ಮಣಿಪುರ, ದೆಹಲಿ ಮತ್ತು ಬೆಂಗಳೂರಿನಲ್ಲೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಭಾರತೀಯ ಗಡಿ ಭದ್ರತಾ ಪಡೆಯ ಸಿಗ್ನಲ್ ಟ್ರೈನಿ ಸ್ಕೂಲ್‌ನಲ್ಲಿ ಹವಲ್ದಾರ್ ಇನ್‌ಸ್ಟ್ರಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಪಂಜಾಬ್‌ನಲ್ಲಿ ನಿವೃತ್ತಿ ಪಡೆಯುತ್ತಿದ್ದಾರೆ.

ಲಾಯಿಲ ಗ್ರಾಮದ ಬಿ.ಕೃಷ್ಣಪ್ಪ ನಾಯ್ಕ್ – ವಾರಿಜಾ ಕೆ. ನಾಯ್ಕ್ ದಂಪತಿಯ ಪುತ್ರ ಗಣೇಶ್ ಇವರು ಕರ್ನೋಡಿ ಸ.ಹಿ.ಪ್ರಾ. ಶಾಲೆ, ಬೆಳ್ತಂಗಡಿಯ ಚರ್ಚ್ ಹಿ.ಪ್ರಾ. ಶಾಲೆ, ಸಂತ ತೆರೆಸಾ ಪ್ರೌಢಶಾಲೆಯಲ್ಲಿ ಓದಿದ್ದು, ಮಂಗಳೂರಿನ ಕೆಪಿಟಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಡಿಪ್ಲೋಮಾ ಪದವಿ ಪಡೆದಿದ್ದರು.

ಗಣೇಶ್ ಬೆಳ್ತಂಗಡಿಯ ನೋಟರಿ ವಕೀಲ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಸಹೋದರನಾಗಿದ್ದು, ಕುವೆಟ್ಟು ಹಿ.ಪ್ರಾ. ಶಾಲೆಯ ಶಿಕ್ಷಕಿ ಅನಿತಾ ಕೆ. ಇವರ ಪತಿ.

p>

LEAVE A REPLY

Please enter your comment!
Please enter your name here