ಮಡಂತ್ಯಾರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, (ಸ್ವಾಯತ್ತ) ಇಲ್ಲಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಮಡಂತ್ಯಾರು ಗ್ರಾ.ಪಂ ಇದರ ಸಹಯೋಗದಲ್ಲಿ ವಿದ್ಯಾರ್ಥಿ ಸಮಾಗಮ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಫೌಂಡೇಷನ್ ಇದರ ತಾಲೂಕು ಸಂಯೋಜಕ ಅಮೃತ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ತಮ್ಮ ಬೇಸಿಗೆ ರಜೆಯನ್ನು ಯಾವ ರೀತಿಯಾಗಿ ಪರಿಪೂರ್ಣಗೊಳಿಸಬೇಕು ಎಂದು ತಿಳಿಸುತ್ತಾ ರಜೆಯಲ್ಲಿ ಕೇವಲ ಮೊಬೈಲ್ ಬಳಕೆಗೆ ದಾಸರಾಗದೆ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ ಮತ್ತು ಗ್ರಾಮೀಣ ಆಟೋಟಗಳನ್ನು ಆಡಿ ಆನಂದಿಸಿ ಎಂದು ಸಲಹೆ ನೀಡಿ, ವಿಶಿಷ್ಟ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ಗ್ರಂಥಪಾಲಕಿ ಸರೋಜಿನಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಶಾಹಿದ್ ಅಫ್ರೀದ್, ರಮಿತ, ವೀಕ್ಷಿತ ಕೋಟ್ಯಾನ್, ವಿಯನ್ನ ವೆನಿಸ ಪಾಯಸ್ ನಡೆಸಿಕೊಟ್ಟರು.