ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಬೆಳ್ತಂಗಡಿ ಹೆರಾಜೆ ಕುಟುಂಬದ ಹಿರಿಯ ಸದಸ್ಯ ಲಾಯಿಲದ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶೇಖರ ಬಂಗೇರ ಹೇರಾಜೆಯವರ ಗೌರವಾರ್ಥವಾಗಿ ನುಡಿ ನಮನ ಕಾರ್ಯಕ್ರಮ ಎ.11ರಂದು ನಡೆಯಿತು.
ಕ್ಷೇತ್ರದ ಗೌರವ ಮಾರ್ಗದರ್ಶಕ ಉಜಿರೆ ಶ್ರೀ ಧ. ಮ. ಕಾಲೇಜು ಪ್ರಾಂಶುಪಾಲ ಬಿ.ಎ.ಕುಮಾರ ಹೆಗ್ಡೆ ನುಡಿ ನಮನ ಸಲ್ಲಿಸಿ ಮಾತನಾಡಿ ಶೇಖರ ಬಂಗೇರರು ಒಬ್ಬ ನಿಸ್ವಾರ್ಥ ಮನೋಭಾವದ ಸರಳ ಸಜ್ಜನಿಕೆಯ ನಿರಾಡಂಬರ ವ್ಯಕ್ತಿಯಾಗಿದ್ದು ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ರಾಯರ ರಾಯಭಾರಿಯಾಗಿ ಗುರುಗಳ ವಾರದಂದು ರಾಯರ ಪಾದ ಸೇರಿದರು, ವಿಜಯ ಬ್ಯಾಂಕಿನ ಹಿರಿಯ ನಿವೃತ್ತ ಮ್ಯಾನೇಜರ್ ಆಗಿದ್ದು ಹಣಕಾಸಿನ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಮುಖಾಂತರ ಮಠದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.
ಕ್ಷೇತ್ರದ ಗೌರವ ಸಲಹೆ ಸುದ್ದಿ ಬಿಡುಗಡೆ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ, ಕೋಶಾಧಿಕಾರಿ ವಸಂತ ಸುವರ್ಣ, ಜೊತೆ ಕಾರ್ಯದರ್ಶಿ ಶಂಕರ ಹೆಗ್ಡೆ, ಅಧ್ಯಕ್ಷ ಪೀತಾಂಬರ ಹೆರಾಜೆ ಮುಂತಾದವರು ಮೃತರ ಗುಣಗಾನವನ್ನು ಮಾಡಿದರು.
ಕ್ಷೇತ್ರದ ಗೌರವ ಸಲಹೆಗಾರ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಟ್ರಸ್ಟಿಗಳಾದ ಶ್ರವಣ್ ರಾಜ್, ನಿಖಿಲ್ ಪೈ, ಜಯರಾಮ ಬಂಗೇರ ಹೆರಾಜೆ, ಶ್ರೀ ಉಮೇಶ್ ಬಂಗೇರ, ವಿಜಯ ಸಾಲಿಯಾನ್, ಲತಾ ಶಿವರಾಮ್, ಕೃಷ್ಣ ಶೆಟ್ಟಿ, ಆನಂದ ಶೆಟ್ಟಿ, ಉದಯ,ಅಶೋಕ ಶೆಟ್ಟಿ, ರಾಘವೇಂದ್ರ ನಗರದ , ಪ್ರದೀಪ್ ಜಿ ಎಸ್, ಜಯಂತ ಬಂಗಾರು , ಶೇಖರ ಬಂಗೇರ ಪುತ್ರಿಯರು ಹಾಗೂ ಕುಟುಂಬಸ್ಥರು ಹಾಜರಿದ್ದರು.
ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದೇವರಿಗೆ ಮಹಾಪೂಜೆ ನಡೆಯಿತು.