ಪುತ್ತೂರು: ದಕ್ಷಿಣ ಕನ್ನಡದ ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಜವಾಹರ್ ನವೋದಯ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದ ಸುಳ್ಯ ವಲಯ ಅರಣ್ಯಧಿಕಾರಿಯಾಗಿರುವ ಎನ್ ಮಂಜುನಾಥ್ ರವರ ಪುತ್ರ ತನ್ಮಯ್ ಪಿ ಎಂ ರವರು ಅತ್ಯುನ್ನತ ಶ್ರೇಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಉತ್ತೀರ್ಣರಾಗಿರುತ್ತಾರೆ.
ತನ್ಮಯ್ ರವರು ಕಳೆದ ವಾರವಾಷ್ಟೇ ಪ್ರಕಟವಾಗಿದ್ದ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲೇ ತರಬೇತಿ ಪಡೆದು ಉತ್ತೀರ್ಣರಾಗಿದ್ದು ಗಮನಾರ್ಹ ಅಂಶವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು ವಿದ್ಯಾಮಾತಾ ಅಕಾಡೆಮಿಯ ತರಬೇತಿಗೆ ಹಿಡಿದ ಕೈಗನ್ನಡಿಯಾಗಿದ್ದು ಇನ್ನೂ ಹಲವಾರು ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲು ಸ್ಫೂರ್ತಿಯಾಗಿದೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಸಂತಸವನ್ನು ವ್ಯಕ್ತಪಡಿಸಿದ್ದು, ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಇನ್ನೂ ಮೂವರು ವಿದ್ಯಾರ್ಥಿಗಳಾದ ವಿಸ್ಮಯ್ ಬಿ.ವಿ, ನಿಖಿಲ್ ಎಂ.ಎಸ್ ಹಾಗೂ ಯುತಿಕಾ ಸಿ ಇವರುಗಳು ಕೂಡ ಉತ್ತೀರ್ಣರಾಗಿದ್ದು, ಮಕ್ಕಳ ಅದ್ಬುತ ಸಾಧನೆಗೆ ವಿದ್ಯಾಮಾತಾ ಅಕಾಡೆಮಿ ಇದರ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮಕ್ಕಳನ್ನು ಅಭಿನಂದಿಸಿದೆ.