ಬೆಳ್ತಂಗಡಿ: ತುಮಕೂರು ಮೂವರ ಹತ್ಯೆ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡಿರುವ ಸಂತ್ರಸ್ತರ ನಿವಾಸಕ್ಕೆ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಕಾಜೂರು ಆಡಳಿತ ಸಮಿತಿಯ ನಿಯೋಗ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕಾರ್ಯ ಮಾಡಿತು.
ಕಾಜೂರು ಧರ್ಮಗುರುಗಳಾದ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್, ವಕ್ಫ್ ಜಿಲ್ಲಾ ಸಮಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರ ನೇತೃತ್ವದ ನಿಯೋಗ ಶಾಹುಲ್ ಹಮೀದ್ ಅವರ ಕುಟುಂಬದ ಮನೆಗೆ ಭೇಟಿ ನೀಡಿತು.
ಮೂರೂ ಕುಟುಂಬಗಳೂ ಸ್ವಂತ ಮನೆ ಇಲ್ಲದೆ, ಇದೀಗ ಮನೆಯ ಯಜಮಾನನ್ನು ಕಳೆದುಕೊಂಡಿದ್ದು ಮತ್ತೂ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ. ಇದನ್ನು ಮನಗಂಡು ಮುಂದಕ್ಕೆ ಅವರಿಗೆ ಸೂರು ನಿರ್ಮಾಣ ಸಂದರ್ಭದಲ್ಲಿ ಸೂಕ್ತವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿತು. ಉಳಿದ ಎರಡೂ ಕುಟುಂಬವನ್ನು ಸಂಪರ್ಕಿಸಿ ಸಾಂತ್ವಾನ ಹೇಳಲಾಯಿತು.
ನಿಯೋಗದಲ್ಲಿ ವಕ್ಫ್ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕಿನಾರ, ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ಕೆ. ಎಮ್ ಅಬೂಬಕ್ಕರ್, ಪ್ರಮುಖರಾದ ಅಶ್ಫಾಕ್ ಕಾಜೂರು, ಶರೀಫ್ ಕಾಜೂರ್, ಆಸಿಫ್ ಜೆ.ಹೆಚ್, ಇರ್ಷಾದ್ ಕಾಜೂರ್, ಬಿ.ಕೆ ಹಿದಾಯತ್ ಕೃಷ್ಣಾಪುರ, ಉಮರ್ಕುಂಞಿ ನಾಡ್ಜೆ ಮೊದಲಾದವರು ಉಪಸ್ಥಿತರಿದ್ದರು.