ದೇವಗಿರಿಯಲ್ಲಿ ಪಾಸ್ಕ ಕಾಲದ ನಲವತ್ತನೆ ಶುಭ ಶುಕ್ರವಾರದ ಶಿಲುಬೆಯ ಹಾದಿ ಸಂಪನ್ನ

0

ನೆಲ್ಯಾಡಿ: ಕ್ರೈಸ್ತರ ಅತ್ಯಂತ ಪವಿತ್ರ ಹಬ್ಬವಾದ ಈಸ್ಟರ್ ಗೆ ಸಿದ್ಧತೆಯಾಗಿ ಆಚರಿಸುವ ವೃತಕಾಲ ಇಂದು ನಲವತ್ತನೇ ದಿನವನ್ನು ಪ್ರವೇಶಿಸಿದೆ.

ಇದರ ಪ್ರಯುಕ್ತ ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಶಿಲುಭೆಯ ಹಾದಿ ಯ ಪುಣ್ಯ ಕ್ಷೇತ್ರ ಗಂಡಿಬಾಗಿಲಿನ ದೇವಗಿರಿ ಶಿಲುಬೆಯ ಹಾದಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಧರ್ಮ ಪ್ರಾಂತ್ಯದ ವಿವಿಧ ಧರ್ಮ ಕೇಂದ್ರಗಳಿಂದ ಮುಂಜಾನೆಯಿಂದಲೇ ದೇವಗಿರಿಯ ಸಂತ ಜುದರ ದೇವಾಲಯದ ಅಂಗಳದಲ್ಲಿ ಸೇರಿ ಬಲಿಪೂಜೆಯನ್ನರ್ಪಿಸಿ ಕೈಗಳಲ್ಲಿ ಸಣ್ಣ ಶಿಲುಬೆಯ ಹರಕೆಯನ್ನೋತ್ತು ದೇವಗಿರಿ ಬೆಟ್ಟವನ್ನು ಲೋಕ ರಕ್ಷಕ ಯೇಸುವಿನ ಯಾತನೆಯನ್ನು ಸ್ಮರಿಸಿ ಶಿಲುಬೆಯ ಹಾದಿಯ ಹಾಡು ಮತ್ತು ಪ್ರಾರ್ಥನೆಯೊಂದಿಗೆ ಬೆಟ್ಟವನ್ನೇರಿದರು.

ಇಂದಿನಿಂದ ಹನ್ನೆರಡು ದಿನಗಳು ಕಠಿಣ ವ್ರತ ಆಚರಣೆಗೆ ಕ್ರೈಸ್ತರು ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ.ಇಷ್ಟಾರ್ಥ ಈಡೇರಿಕೆ, ಹಾಗೂ ಪಾಪ ವಿಮೋಚನೆಗಾಗಿ ಕ್ರೈಸ್ತರು ಇದರಲ್ಲಿ ಬಾಗವಹಿಸಿ ಪ್ರಾರ್ಥಿಸುತ್ತಾರೆ. ಪ್ರತಿ ವರ್ಷವೂ ವಿವಿಧ ಸ್ಥಳಗಳಿಂದ ಧರ್ಮ ಗುರುಗಳೂ, ಭಗೀನಿಯರು ಹಾಗೂ ಭಕ್ತಾದಿಗಳು ದೊಡ್ಡ ಸಂಖ್ಯೆ ಯಲ್ಲಿ ಇದರಲ್ಲಿ ಭಾಗವಹಿಸುತ್ತಾರೆ.

p>

LEAVE A REPLY

Please enter your comment!
Please enter your name here