ಕಲ್ಮಂಜ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೊಂಚಲು ಸ್ತ್ರೀಶಕ್ತಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾ.15ರಂದು ನಡೆಸಲಾಯಿತು.
ಗೊಂಚಲು ಸ್ತ್ರೀಶಕ್ತಿಯ ಅಧ್ಯಕ್ಷೆ ಸಾದ್ವಿ ಪ್ರಭು, ಗ್ರಾ.ಪಂ ಅಧ್ಯಕ್ಷೆ ವಿಮಲ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೇಲ್ವಿಚಾರಕಿ ಲಲಿತಾ, ಸಂಧ್ಯಾ ಫ್ರೆಶ್ ಸಿ.ಇ.ಓ ಅರ್ಚನಾ ರಾಜೇಶ್ ಪೈ, ಆರ್ಥಿಕ ಸಮಾಲೋಚಕಿ ಉಷಾ ಕಾಮತ್, ಗ್ರಾ.ಪಂ ಕಾರ್ಯದರ್ಶಿ ಸರೋಜಿನಿ ಉಪಸ್ಥಿತರಿದ್ದರು.
ಮಮತಾ ಸ್ವಾಗತಿಸಿದರು.
ಹಿರಿಯ ನಾಯಕರಿಗೆ ಸನ್ಮಾನ ಮಾಡಲಾಯಿತು.ಕೊನೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
p>