ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ

0

ಶಿರ್ಲಾಲು: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮಾ.10ರಂದು ಜರಗಿತು.

ಸೀಮೆ ತಂತ್ರಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಬೆಳಿಗ್ಗೆ ತೋರಣ ಮುಹೂರ್ತ, ಏಕದಶ ರುದ್ರಾಭಿಷೇಕ, 25 ಕಲಶಾಭಿಷೇಕ, ಮಹಾ ಪೂಜೆ, ಅನ್ನಸಂತರ್ಪಣೆ, ರಾತ್ರಿ ಶಿರ್ಲಾಲು ಗುತ್ತಿನಿಂದ ಕೊಡಮಣಿತ್ತಾಯ ದೈವದ ಮತ್ತು ಪರಾರಿ ಬರ್ಕೆಯಿಂದ ಉಳ್ಳಾಲ್ತಿ ಭಂಡಾರ ಆಗಮನ, ರಂಗ ಪೂಜೆ, ಬಲಿ ಉತ್ಸವ, ನಂತರದೈವಗಳಿಗೆ ನೇಮೋತ್ಸವ ನಡೆಯಿತು.

ದೇವಸ್ಥಾನದ ಆಡಳಿತಾಧಿಕಾರಿ ಡಾ.ರಮೇಶ್ ಅಳದಂಗಡಿ ಇವರ ಮುಂದಾಳತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅರ್ಚಕ ಸೂರ್ಯ ನಾರಾಯಣ ಭಟ್, ಸೋಮನಾಥ ಬಂಗೇರ ವರ್ಪಳೆ, ಸಂಜೀವ ಪೂಜಾರಿ ಕೊಡಂಗೆ, ಚಿದಾನಂದ ಪೂಜಾರಿ ಎಲ್ದಕ್ಕ, ಕುಶಾಲಪ್ಪ ಗೌಡ ಪೊಸಲಾಯಿ, ರಮೇಶ್ ಬಂಗೇರ ಅಭಿ ನಿವಾಸ, ವಿಶ್ವನಾಥ ಸಾಲಿಯಾನ್ ಪುದ್ದರಬೈಲು, ಕೃಷ್ಣಪ್ಪ ಪೂಜಾರಿ ಸುದಲಾಯಿ, ಚಿದಾನಂದ ಸಾಲಿಯಾನ್ ಇಂಚರ, ಜನಾರ್ದನ ಪೂಜಾರಿ ನಡುಕುಲೆಂಜಿ, ಪದ್ಮಯ್ಯ ಗೌಡ ಶಿವಾನಂದ ಮಜಲಪಲ್ಕೆ, ಗುಣಮ್ಮ ಪಿ. ಜೈನ್, ತಾಲೂಕು ಆರಾಧನಾ ಸಮಿತಿ ಸದಸ್ಯೆ ಜಯಶೀಲಾ ಕುಶಾಲಪ್ಪ ಗೌಡ, ಅಲ್ಲದೆ ಅನೇಕ ಪ್ರಮುಖರು ಭಕ್ತರು ಭಾಗವಹಿಸಿದ್ದರು.

ಮಾ.14ರಂದು ಕುಟೆಕ್ಕಿನಡೆ ದೊಂಪದಬಲಿ, ಮಾ.21ರಂದು ಬೆಳಿಗ್ಗೆ ಏಕದಶ ರುದ್ರಾಭಿಷೇಕ, ಕಲಶಾಭಿಷೇಕ ಮಹಾಪೂಜೆ ರಾತ್ರಿ ದೊಡ್ಡ ರಂಗಪೂಜೆ, ಬಲಿ ಉತ್ಸವ, ಬಳಿಕ ಅಂಗಣ ಪಂಜುರ್ಲಿ ನೇಮೋತ್ಸವ ಜರಗಲಿದೆ.

p>

LEAVE A REPLY

Please enter your comment!
Please enter your name here