

ಅಳದಂಗಡಿ: ಕುದ್ಯಾಡಿಯಲ್ಲಿ ಪ್ರಪ್ರಥಮ ಬಾರಿಗೆ ಶುಭಕರ ಪೂಜಾರಿ ಇವರ ಸಾರಥ್ಯದಲ್ಲಿ ಬಿಡ್ಡಿಂಗ್ ಮಾದರಿಯ ಪ್ರೀಮಿಯಂ ಲೀಗ್ ಕೋಟಿ ಚೆನ್ನಯ ಟ್ರೋಫಿ-2024 ಸೀಸನ್ 1 ಕ್ರಿಕೆಟ್ ಪಂದ್ಯಾಟವು ಮಾ.10ರಂದು ನಡೆಯಿತು.
ಉದ್ಘಾಟನೆಯನ್ನು ಬ್ರಹ್ಮ ಬೈದರ್ಕಳ ಗರಡಿಯ ಗೌರವಧ್ಯಕ್ಷ ಕೊರಗಪ್ಪ ಪೂಜಾರಿ ಕೊಡಿಬಾಳೆಯವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಯಶೋಧರ ಸಾಲಿಯಾನ್ ಬಾಕ್ಯರಡ್ಡ, ಗ್ರಾಮ ಪಂಚಾಯತ್ ಸದಸ್ಯರಾದ ಯಶೋದ ಎಲ್.ಬಂಗೇರ, ಮಾಜಿ ಉಪಾಧ್ಯಕ್ಷ ಸುಂದರ ಆಚಾರ್ಯ ಅಂತರೊತ್ತು, ಮುಂಡಾಜೆ ಗುತ್ತಿನ ಶಶಿಕಾಂತ ಜೈನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಕ್ರಿಕೆಟ್ ತಂಡದ ಮಾಲಿಕರಾದ ಶಶಿಧರ ಪೂಜಾರಿ ಶಿವನಾಗ, ರಾಜೇಶ್ ಪೂಜಾರಿ ಸೆಂಟ್ರಿಂಗ್, ಪ್ರಶಾಂತ್ ಪೂಜಾರಿ ಪೈಂಟರ್, ರಾಜೇಶ್ ಹೊಂಬೆಜೆ, ರಾಜೇಶ್ ಬಿರ್ಮಜರಿ, ರಾಜೇಶ್ ಮತ್ತು ದಿನೇಶ್ ಹಿಮರಡ್ಡ ಉಪಸ್ಥಿತರಿದ್ದರು.
ಸ್ವಾಗತವನ್ನು ಶುಭಕರ ಪೂಜಾರಿ ನೀಡಿ ಕಾರ್ಯಕ್ರಮ ನಿರೂಪಣೆ ಡಾ.ಪ್ರವೀಣ್ ಪೂಜಾರಿ ಬಿರ್ಮಜಿರಿ ಮಾಡಿ ಧನ್ಯವಾದವನ್ನು ಸಜಿತ್ ಕುದ್ಯಾಡಿ ನೀಡಿದರು.