ವೇಣೂರು: ವೇಣೂರು ವಿದ್ಯುತ್ ಸಬ್ ಸ್ಟೇಷನ್ ಗೆ ನೂತನ 8 ಎಂವಿಎ ಸಾಮರ್ಥ್ಯದ ಪರಿವರ್ತಕವನ್ನು ಮಾ.10ರಂದು ಅಳವಡಿಸಲಾಯಿತು.ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ವರೆಗೆ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆಗೊಳಿಸಿ ಕಾಮಗಾರಿ ನಿರ್ವಹಿಸಲಾಯಿತು.
ಈ ಹಿಂದೆ ಇಲ್ಲಿ 5 ಎಂವಿಎ ಸಾಮರ್ಥ್ಯದ ಪರಿವರ್ತಕ ಇತ್ತು.ಇದಕ್ಕೆ ವಿದ್ಯುತ್ ಹೊರೆ ಅಧಿಕವಾಗಿದ್ದ ಕಾರಣ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಮಸ್ಯೆಯಾಗುತ್ತಿತ್ತು.
ಇದೀಗ 8 ಎಂವಿಎ ಸಾಮರ್ಥ್ಯದ ಪರಿವರ್ತಕ ಅಳವಡಿಕೆಯಿಂದ ಬಜಿರೆ, ಕರಿಮಣೇಲು, ಹೊಸಂಗಡಿ, ಬಡಕೋಡಿ, ಕಾಶಿಪಟ್ಣ,ಅಂಡಿಂಜೆ, ಮೂಡುಕೋಡಿ ನಿಟ್ಟಡೆ, ಕೊಕ್ರಾಡಿ, ಕುಕ್ಕೇಡಿ, ಆರಂಬೋಡಿ, ಗುಂಡೂರಿ ಮೊದಲಾದ ಗ್ರಾಮಗಳ 12 ಸಾವಿರಕ್ಕಿಂತ ಅಧಿಕ ಗೃಹಬಳಕೆಯ ಹಾಗೂ 2,500ಕ್ಕಿಂತ ಅಧಿಕ ಪಂಪು ಸೆಟ್ ಬಳಕೆದಾರರಿಗೆ ಅನುಕೂಲವಾಗಲಿದೆ.
ಬಂಟ್ವಾಳ ವಿಭಾಗದ ಮೆಸ್ಕಾಂ ಇಇ ವೆಂಕಟೇಶ್ ಅವರ ನಿರ್ದೇಶನದಲ್ಲಿ ಕಾಮಗಾರಿ ನಡೆದಿದ್ದು. ಬೆಳ್ತಂಗಡಿ ಮೆಸ್ಕಾಂ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್, ಜೆಇ ಗಣೇಶ್ ನಾಯ್ಕ್, ಎಂಪಿಟಿಯ ಇಇ ಶಾಂತಕುಮಾರ್, ಎಇಇ ಮಹಮ್ಮದ್ ಸಾದಿಕ್ ನೇತೃತ್ವ ವಹಿಸಿದ್ದರು.