ಉಜಿರೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಾಹನ ರ್‍ಯಾಲಿ

0

ಉಜಿರೆ: ಉಜಿರೆಯ ಶಾರದಾ ಮಂಟಪ ಪಠಾರದಿಂದ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಡೆದ ವಾಹನ ರ್‍ಯಾಲಿಗೆ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಚಾಲನೆ ನೀಡಿದರು.

ಅವರು ಮಾತನಾಡಿ “ಮೋದಿ ಸರಕಾರ ನೂರಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಆತ್ಮಶಕ್ತಿ ಜಾಗೃತಗೊಳಿಸಿ ಸರಿಸಮಾನ ಸ್ಥಾನಮಾನ ನೀಡಿದೆ.ಮಹಿಳಾ ಮೀಸಲಾತಿ ಮಸೂದೆ ಲೋಕಸಭೆ, ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಗೊಂಡಿರುವುದು ಅವಕಾಶಗಳನ್ನು ಇನ್ನಷ್ಟು ಹೆಚ್ಚಿಸಿದೆ” ಎಂದರು.

ಬಿಜೆಪಿ ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಮಾತನಾಡಿ “ಕೇಂದ್ರ ಸರಕಾರವು ಮಹಿಳೆಯರಿಗೆ ಮೀಸಲಾತಿ ಹಕ್ಕನ್ನು ಜಾರಿಗೊಳಿಸಿರುವುದು ಶ್ಲಾಘನೀಯ.ಅನೇಕ ವರ್ಷಗಳಿಂದ ಇದರ ಜಾರಿಗೆ ಕಾಯುತ್ತಿದ್ದ ಮಹಿಳೆಯರಲ್ಲಿ ಇಂದು ಸಂತಸ ಮೂಡಿದ್ದು ಅದಕ್ಕಾಗಿ ವಿಶೇಷ ವಾಹನ ರಾಲಿ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸರಾವ್, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಪ್ರಮುಖರಾದ ಕೊರಗಪ್ಪ ಗೌಡ, ಜಯಂತಗೌಡ ಗುರಿಪಳ್ಳ, ಅರವಿಂದ ಲಾಯಿಲ, ಜಯಾನಂದ ಗೌಡ ಪ್ರಜ್ವಲ್, ಸೀತಾರಾಮ ಬೆಳಾಲು, ಯಶವಂತ ಪುದುವೆಟ್ಟು ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾದ ತಾಲೂಕು ಕಾರ್ಯದರ್ಶಿ ಪೂರ್ಣಿಮಾ ಮುಂಡಾಜೆ ಸ್ವಾಗತಿಸಿದರು.

ಉಜಿರೆಯ ಜನಾರ್ದನ ದೇವಸ್ಥಾನದಿಂದ ಬೆಳಾಲು ಕ್ರಾಸ್ ತನಕ ನೂರಾರು ಮಹಿಳೆಯರಿಂದ ವಾಹನ ಜಾಥಾ ನಡೆಯಿತು.

p>

LEAVE A REPLY

Please enter your comment!
Please enter your name here